Connect with us

Corona

ಹಾಸನದಲ್ಲಿ ಇಬ್ಬರು ತಹಶೀಲ್ದಾರ್ ಸೇರಿ ಇಂದು 112 ಜನರಿಗೆ ಕೊರೊನಾ

Published

on

– ಮಹಾಮಾರಿಗೆ ಇಬ್ಬರು ಬಲಿ

ಹಾಸನ: ಜಿಲ್ಲೆಯಲ್ಲಿ ಇಬ್ಬರು ತಹಶೀಲ್ದಾರ್ ಸೇರಿದಂತೆ ಇಂದು 112 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಇನ್ನೂ ಆಘಾತಕಾರಿ ಅಂಶವೆಂದರೆ ಇಂದು ಇಬ್ಬರನ್ನು ಮಹಾಮಾರಿ ಬಲಿ ಪಡೆದಿದೆ. ಅಲ್ಲದೆ ಒಂದೇ ದಿನ 112 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯ ಜನರನ್ನು ನಿದ್ದೆಗೆಡಿಸಿದೆ. ಪೊಲೀಸರು, ತಹಶೀಲ್ದಾರ್, ಕೊರೊನಾ ವಾರಿಯರ್ಸ್ ಗೂ ಕೊರೊನಾ ಹೆಚ್ಚು ಕಾಡುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,239 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 653 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 549 ಸಕ್ರಿಯ ಸೋಂಕಿತರಿದ್ದು, ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

Click to comment

Leave a Reply

Your email address will not be published. Required fields are marked *