CrimeLatestMain PostNational

ಹಾವಿನ ವಿಷ ಮಾರಾಟ- 1 ಕೋಟಿ ಬೆಲೆಯ ವಿಷದೊಂದಿಗೆ 6 ಮಂದಿ ಅರೆಸ್ಟ್

ಭುವನೇಶ್ವರ: ಹಾವಿನ ವಿಷವನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಗುಂಪನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಹಾವಿನ ವಿಷವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗುಂಪನ್ನು ಪತ್ತೆ ಹಚ್ಚಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಒರ್ವ ಮಹಿಳೆ ಸೇರಿದಂತೆ 6 ಮಂದಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.

1 ಲೀಟರ್ ಹಾವಿನ ವಿಷ ವಶಪಡಿಸಿಕೊಳ್ಳಲಾಗಿದೆ. ಈ ವಿಷವನ್ನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಹಾವಿನ ವಿಷಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಅರಣ್ಯ ಇಲಾಖೆ ಡಿಎಫ್‍ಒ ಅಶೋಕ್ ಮಿಶ್ರಾ ಹೇಳಿದ್ದಾರೆ.

ಬಂಧಿತ ಆರೋಪಿಗಳು 1 ಲೀಟರ್ ಹಾವಿನ ವಿಷವನ್ನು ತೆಗೆಲು 200 ನಾಗರಹಾವುಗಳನ್ನು ಬಳಕೆ ಮಾಡಿದ್ದಾರೆ. 1972ರ ವನ್ಯಜೀನಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಲಾಗಿದ್ದು, ನಾಳೆ ಕೋರ್ಟಿಗೆ ಆರೋಪಿಗಳನ್ನು ಹಾಜರು ಪಡಿಸುತ್ತೇವೆ ಎಂದು ಅಶೋಕ್ ಮಿಶ್ರಾ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button