ಹಾಡಹಗಲೇ ರೌಡಿಶೀಟರ್‌ನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದ್ರು!

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಮತ್ತೆ ಮಚ್ಚು ಲಾಂಗ್ ಗಳ ಸದ್ದು ಮಾಡಿದ್ದು ಹಾಡಹಗಲೇ ರೌಡಿಶೀಟರ್ ಸಿಡಿ ರಮೇಶ್ (30)ನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.

ಬಳ್ಳಾರಿಯ ಕೌಲ್ ಬಜಾರ್ ಪ್ರದೇಶದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಳಿಯ ಟಿಬಿ ಸ್ಯಾನಿಟೆರಿಯಂ ಬಳಿ ಕೊಚ್ವಿ ಕೊಲೆ ಮಾಡಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -

ಆಸ್ಪತ್ರೆಯ ಹಿಂಭಾಗದಲ್ಲಿ ಸಿಡಿ ರಮೇಶ್ ಇರುವುದನ್ನು ಗಮನಿಸಿದ ದುಷ್ಕರ್ಮಿಗಳ ತಂಡ ಆಟೋದಲ್ಲಿ ಬಂದ ಮನಬಂದಂತೆ ಅಟ್ಟಾಡಿಸಿ ಕೊಚ್ವಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಕೌಲಬಜಾರ್ ಠಾಣೆಯ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

- Advertisement -

ಕಳೆದ 2014 ರಂದು ಇವರ ಸಹೋದರ ಸಿಡಿ ರವಿಯನ್ನಿ ಸಹ ಇದೇ ಜಾಗದಲ್ಲಿ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಲ್ಲದೆ ಕೊಲೆಗೆ ರಾಜಕೀಯ ವೈಷಮ್ಯ ಕಾರಣ ಎಂದು ಹೇಳಲಾಗುತ್ತಿದ್ದು, 2014 ರಲ್ಲಿ ಕೊಲೆಯಾದ ರವಿ ಬಳ್ಳಾರಿ ಜಿಲ್ಲಾ ಪಂಚಾಯತಿ (ಬಿಜೆಪಿ) ಉಪಾಧ್ಯಕ್ಷೆ ಸವಿತಾ ಬಾಯಿ ಅವರ ಪತಿ. ಹೀಗಾಗಿ ಅಂದು ರವಿಯನ್ನು ಕೊಲೆ ಮಾಡಿರುವ ತಂಡವೇ ಇಂದು ಸಿಡಿ ರಮೇಶ್ ಅವರನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -