– ಬೆಚ್ಚಿಬಿದ್ದ ಶಿಡ್ಲಘಟ್ಟ
ಚಿಕ್ಕಬಳ್ಳಾಪುರ: ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನನ್ನ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.
43 ವರ್ಷದ ಅಮಜದ್ ಕೊಲೆಯಾದ ಕಾಂಗ್ರೆಸ್ ಮುಖಂಡ. ಬೈಕ್ ನಲ್ಲಿ ತೆರಳುತ್ತಿದ್ದ ಅಮಜದ್ ನನ್ನು ಒಮ್ನಿ ಕಾರಿನ ಮೂಲಕ ಹಿಂಬಾಲಿಸಿ ಬಂದ ಅಪರಿಚಿತರು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೃತ ಅಮಜದ್ ಸ್ಥಳೀಯ ಕಾಂಗ್ರೆಸ್ ಮುಖಂಡನಾಗಿದ್ದು, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದನು.
ಶಿಡ್ಲಘಟ್ಟ ನಗರ ಪೊಲೀಸರು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆಯ ಉದ್ದೇಶ ತಿಳಿದುಬಂದಿಲ್ಲ. ಹಾಡಹಗಲೇ ಕೊಲೆ ನಡೆದ ವಿಷಯ ತಿಳಿದ ಶಿಡ್ಲಘಟ್ಟ ಪಟ್ಟಣದ ಜನ ಆತಂಕದಲ್ಲಿದ್ದಾರೆ.