ಬೆಂಗಳೂರು: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ಚಿತ್ರಮಂದಿರಗಳಲ್ಲಿನ ಆಸನ ಭರ್ತಿಗೆ ಶೇ.50ರಷ್ಟು ನಿರ್ಬಂಧ ಹೇರಿದ್ದು, ಇದಕ್ಕೆ ಸ್ಯಾಂಡಲ್ವುಡ್ನ ಹಲವು ಗಣ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನಟ ಯಶ್ ಸಹ ಕಿಡಿಕಾರಿದ್ದಾರೆ.
#WeWant100PercentOccupancy @BSYBJP @PuneethRajkumar @SanthoshAnand15@hombalefilms#Yuvarathna pic.twitter.com/hR0I90mZ8t
— Yash (@TheNameIsYash) April 3, 2021
Advertisement
ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮಲ್ಲಿ ಜಾಗೃತಿ ಮೂಡಿದೆ, ಜವಾಬ್ದಾರಿಯೂ ಇದೆ. ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ. ನಿರ್ಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು ಮುಳುವಾಗಬಾರದು ಎಂದು ಸರ್ಕಾರದ ನಿಯಮದ ವಿರುದ್ಧ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶ ಇದೆ, ಚಿತ್ರ ರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೆ ಜಾರಿ ಮಾಡಿರುವ ಈ ನಿರ್ಬಂಧನೆಗಳಿಂದ ಚಿತ್ರರಂಗ ಬಲಿ! ಎಂದು ಕಿಡಿಕಾರಿದ್ದಾರೆ.
Advertisement
Advertisement
ಟ್ವೀಟ್ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಷ್ ಆನಂದ್ರಾಮ್, ಹೊಂಬಾಳೆ ಫಿಲಂಸ್ ಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಹ್ಯಾಶ್ ಟ್ಯಾಗ್ ಬಳಸಿ ಯುವರತ್ನ ಎಂದು ಬರೆದಿದ್ದಾರೆ.
Goin bk to 50% theatrical occupancy is surely a shocker to a film tats jus released. Respecting the govts decision too is our duty, keeping in mind its for a reason. I wsh team #Yuvaratna the best of strength to over come this situation and come out victorious. @hombalefilms
— Kichcha Sudeepa (@KicchaSudeep) April 3, 2021
ಸರ್ಕಾರದ ಕ್ರಮವನ್ನು ಬಹುತೇಕ ಸ್ಯಾಂಡಲ್ವುಡ್ ನಟರು ಖಂಡಿಸಿದ್ದು, ಇಂದು ಬೆಳಗ್ಗೆ ನಟ ಸುದೀಪ್ ಸಹ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ದುನಿಯಾ ವಿಜಯ್ ಸಹ ಕಿಡಿಕಾರಿದ್ದರು. ಅಲ್ಲದೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಸಹ ಪ್ರತಿಭಟನೆ ನಡೆಸಿದ್ದಾರೆ. ಆದೇಶವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.