ಮಂಡ್ಯ: ಹಳೆ ಮೈಸೂರು ಭಾಗದ ಜನರ ಜೀವನಾಡಿಯಾಗಿರುವ ಕೆಆರ್ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ.
ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ನಲ್ಲಿ ಕೇವಲ 7 ದಿನಗಳ ಅಂತರದಲ್ಲಿ 15 ಅಡಿಗೂ ಹೆಚ್ಚು ನೀರು ಬಂದಿದೆ.
Advertisement
Advertisement
124.80 ಅಡಿ ಗರಿಷ್ಠ ಸಾಮರ್ಥ್ಯ ವಿರುವ ಡ್ಯಾಂನಲ್ಲಿ ಸದ್ಯ 124.05 ಅಡಿ ಭರ್ತಿಯಾಗಿದೆ. ಒಳ ಹರಿವು 13,581 ಕ್ಯೂಸೆಕ್ ಇದ್ದರೆ, 3,863 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇತ್ತ ಕೆಆರ್ಎಸ್ ಭರ್ತಿಯಿಂದ ರೈತರು ಸಂತಸರಾಗಿದ್ದಾರೆ.
Advertisement
ಇನ್ನೂ ಕೆಲವೇ ದಿನಗಳಲ್ಲಿ ಬಾಗಿನ ಅರ್ಪಿಸಲಾಗುತ್ತದೆ. ಕೆಆರ್ಎಸ್ ಭರ್ತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಾಗಿನ ಅರ್ಪಣೆ ಮಾಡಲಿದ್ದಾರೆ. ಕಳೆದ ವರ್ಷ ಕೆಆರ್ಎಸ್ ಆ.17ರಂದು ಭರ್ತಿಯಾಗಿದ್ದು, ಆ.29ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅರ್ಪಿಸಿದ್ದರು.
Advertisement
ಕೆಆರ್ಎಸ್ ಜಲಾಶಯದ ನೀರಿನಮಟ್ಟ 124.05 ಅಡಿ, ಗರಿಷ್ಟಮಟ್ಟ 124.80 ಅಡಿ, ಒಳಹರಿವು 13,581 ಕ್ಯೂಸೆಕ್, ಹೊರ ಹರಿವು 3,863 ಕ್ಯೂಸೆಕ್, ನೀರಿನ ಸಂಗ್ರಹ -48.405 ಟಿಎಂಸಿ ಇದ್ದರೆ ಗರಿಷ್ಠ ಸಾಮರ್ಥ್ಯ 49.50 ಟಿಎಂಸಿ ಆಗಿರುತ್ತದೆ.