– ಫೀಸ್ ಫೈಟ್ಗೆ ತಾತ್ಕಾಲಿಕ ಬ್ರೇಕ್
ಬೆಂಗಳೂರು: ಸರ್ಕಾರ ಹಾಗೂ ಖಾಸಗಿ ಶಾಲೆಗಳ ನಡುವಿನ ಫೀಸ್ ಫೈಟ್ಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಶಿಕ್ಷಣ ಸಚಿವರ ಹೇಳಿಕೆಯಿಂದ ಕೆಂಡಾಮಂಡಲರಾಗಿದ್ದ ಖಾಸಗಿ ಶಾಲೆಗಳ ಜೊತೆ ಶಿಕ್ಷಣ ಇಲಾಖೆ ಆಯುಕ್ತರು ನಡೆಸಿದ ಸಂಧಾನ ಸಭೆ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ.
ಆನ್ಲೈನ್ ಕ್ಲಾಸ್ ರದ್ದು ಮಾಡುವ ಎಚ್ಚರಿಕೆ ಕೊಟ್ಟಿದ್ದ ಖಾಸಗಿ ಶಾಲೆಗಳು ತಮ್ಮ ನಿರ್ಧಾರದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿವೆ. ಯಾರಿಗೂ ಆನ್ಲೈನ್ ಕ್ಲಾಸ್ ಸ್ಥಗಿತ ಮಾಡುವುದಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಹೇಳಿ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ 15 ದಿನ ಗಡುವು ಕೂಡ ಕೊಟ್ಟಿದೆ. ಆಯುಕ್ತರ ಸಭೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟ ಹಲವು ಬೇಡಿಕೆಗಳನ್ನು ಮುಂದಿಟ್ಟಿವೆ.
Advertisement
Advertisement
ಬೇಡಿಕೆ ಏನು?
ಸರ್ಕಾರ ಶೀಘ್ರವೇ 2ನೇ ಕಂತಿನ ಫೀಸ್ ಬಗ್ಗೆ ನಿರ್ಧರಿಸಿ ಪೋಷಕರಿಗೆ ಕನಿಷ್ಠ ಶುಲ್ಕ ಪಾವತಿಸಲು ಸರ್ಕಾರ ಸೂಚಿಸಬೇಕು. ಆರ್ಟಿಇ ಹಣವನ್ನು ಸರ್ಕಾರ ಖಾಸಗಿ ಶಾಲೆಗಳಿಗೆ ಪಾವತಿ ಮಾಡಬೇಕು.
Advertisement
ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ನೀಡಬೇಕು. 1-8ನೇ ತರಗತಿ ಮಕ್ಕಳನ್ನು ಪರೀಕ್ಷೆ ಇಲ್ದೇ ಪಾಸ್ ಮಾಡಬಾರದು. ಮಕ್ಕಳ ಶಿಕ್ಷಣ ಮಟ್ಟದ ಪರೀಕ್ಷೆ ಕನಿಷ್ಠ ಪ್ರಮಾಣದಲ್ಲಾದರೂ ಆಗಬೇಕು. 15 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಮಾಡಬೇಕು.