-ಇದ್ದಿಲು, ಸಗಣಿ, ಅರಿಶಿಣ, ಸುಣ್ಣದ ಕಲ್ಲಿನಿಂದಾದ ‘ಭೈರವ’
ಚೆನ್ನೈ: ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ‘ಭೈರವ’ ಪೇಂಟಿಂಗ್ ಆನ್ಲೈನ್ ನಲ್ಲಿ 5.1 ಕೋಟಿ ರೂ.ಗೆ ಮಾರಾಟವಾಗಿದೆ. ಒಂದು ತಿಂಗಳು ಈ ಪೇಂಟಿಂಗ್ ಪ್ರದರ್ಶನಕ್ಕೆ ಇರಿಸಲಾಗಿತ್ತು. ಆನ್ಲೈನ್ ಲಲಿ ಅಂತಿಮವಾಗಿ 5.1 ಕೋಟಿಗೆ ಬಿಡ್ ಮಾಡಲಾಗಿತ್ತು. ಪೇಂಟಿಂಗ್ ನಿಂದ ಬಂದ ಹಣವನ್ನು ಇಶಾ ಫೌಂಡೇಶನ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಲಿದೆ.
Advertisement
ಈ ಹಿಂದೆ ಜಗ್ಗಿ ವಾಸುದೇವ್ ಅವರ ಪೇಂಟಿಂಗ್ 4 ಕೋಟಿ ರೂ.ಗೆ ಮಾರಾಟವಾಗಿತ್ತು. ಈ ಹಣವನ್ನು ‘ಬೀಟ್ ದ ವೈರಸ್’ ಸಂಸ್ಥೆಗೆ ದಾನವಾಗಿ ನೀಡಿದ್ದರು. ಸದ್ಯ ಬಂದಿರುವ ಹಣವನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ನೀಡುವ ಸಾಧ್ಯತೆಗಳಿವೆ ಎಂದು ವರದಿಯಾಗಿವೆ.
Advertisement
Advertisement
ಸೋಮವಾರ ಮಾರಾಟಗೊಂಡಿರುವ ಪೇಂಟಿಂಗ್ ಪ್ರಸಿದ್ಧ ಬೈರವ ಹೆಸರಿನ ಎತ್ತಿನ ನೆನಪಿಗಾಗಿ ಮಾಡಲಾಗಿತ್ತು. ಬೈರವ ಎತ್ತು ಏಪ್ರಿಲ್ ನಲ್ಲಿ ಸಾವನ್ನಪ್ಪಿತ್ತು. ಜಗ್ಗಿ ವಾಸುದೇವ ಅವರು ಪೇಂಟಿಂಗ್ ಬ್ಯಾಕ್ಡ್ರಾಪ್ ನಲ್ಲಿ ಹಸುವಿನ ಸಗಣಿ ಬಳಸಿದ್ದಾರೆ. ಜೊತೆಗೆ ಇದ್ದಿಲು, ಸುಣ್ಣದ ಕಲ್ಲು ಮತ್ತು ಅರಿಶಿಣ ಬಳಸಿ ಬೈರವ ಪೇಂಟಿಂಗ್ ಮಾಡಲಾಗಿದೆ. ಇನ್ನು ಪೇಂಟಿಂಗ್ ಮಾರಾಟಗೊಂಡಿರುವ ಬಗ್ಗೆ ಜಗ್ಗಿ ವಾಸುದೇವ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಆದ್ರೆ ಪೇಂಟಿಂಗ್ ಖರೀದಿದಾರರ ಮಾಹಿತಿಯನ್ನು ತಿಳಿಸಿಲ್ಲ.
Advertisement
ಜಗ್ಗಿ ವಾಸುದೇವ ಟ್ವೀಟ್: ಬೈರವನಿಗೆ ಅವನ ಮನೆಯನ್ನು ಹುಡುಕೊಂಡಿದ್ದಾನೆ. ನಮ್ಮ ಪ್ರೀತಿಯ ಎತ್ತು ಜೀವಂತವಿದ್ದಾಗಲೂ, ಸತ್ತ ಮೇಲೆಯೂ ನಮ್ಮೆಲ್ಲರ ಸೇವೆ ಮಾಡುತ್ತಿದ್ದಾನೆ. ದಾನಿ (ಖರೀದಿದಾರ)ಗಳ ದಯೆ ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಕರಿಗೆ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡುವಂತೆ ಮಾಡಿದೆ.
‘Bhairava’ has found a home. Our gentle bull serving us well in Life & Beyond. The donor’s compassion & generosity will enable our volunteers to continue to serve rural communities rendered helpless by the pandemic. –Sg #BeatTheVirus https://t.co/8plwD4VkTv pic.twitter.com/PTrhZUKBqB
— Sadhguru (@SadhguruJV) July 6, 2020