ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಒಂದು ವಾರಗಳ ಕಾಲ ಘೋಷಣೆ ಮಾಡಿದ್ದ ಲಾಕ್‍ಡೌನ್ ಇಂದು ಮುಗಿಯಲಿದೆ. ಇದೀಗ ಸಿಲಿಕಾನ್ ಸಿಟಿಗೆ ಕೊರೊನಾ ಸಂದರ್ಭದಲ್ಲಿ ಹೊಸ ಸವಾಲು ಎದುರಾಗಲಿದೆ.
ಶ್ರಾವಣ ಮಾಸ ಆರಂಭದ ಬೆನ್ನಲ್ಲೆ ಹಬ್ಬಗಳ ಸೀಸನ್ ಆರಂಭವಾಗಲಿದೆ. ಈ ಹಬ್ಬಗಳ ಸೀಸನ್ ಬೆಂಗಳೂರಿಗೆ ಟೆನ್ಶನ್ ಆಗಿದೆ. ಈ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಸಾಲಾಗಿ ಹಬ್ಬಗಳು ಶುರುವಾಗುತ್ತವೆ. ಇದರಿಂದ ಜನರ ವಲಸೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ಒಂದು ವಾರದ ಲಾಕ್‍ಡೌನ್ ತೆರವಿನ ಬಳಿಕ ಹೊಸ ಚಾಲೆಂಜ್ ಎದುರಾಗಲಿದೆ.
Advertisement
Advertisement
ಹಬ್ಬಗಳ ಸಮಯದಲ್ಲಿ ಬೆಂಗಳೂರಿನಿಂದ ಅನೇಕರು ತಮ್ಮ ತಮ್ಮ ಊರಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಳವಾಗುತ್ತೆ. ಹೀಗಾಗಿ ಬೆಂಗಳೂರಿನಿಂದ ವೈರಸ್ ಹಳ್ಳಿಗಳ ಭಾಗಕ್ಕೆ ಶಿಫ್ಟ್ ಆಗುವ ಸಾಧ್ಯತೆಯ ಬಗ್ಗೆ ಆತಂಕ ಶುರುವಾಗಿದೆ.
Advertisement
ಏಕಾಏಕಿ ಲಾಕ್‍ಡೌನ್ ತೆರವು ಇನ್ನೊಂದಿಷ್ಟು ಅವಾಂತರಕ್ಕೆ ಕಾರಣವಾಗಲಿದೆ. ಹಾಗಾಗಿ ಹಬ್ಬಗಳ ಸಮಯದಲ್ಲಿ ಆದಷ್ಟು ಬಿಗಿ ಕ್ರಮ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು, ತಜ್ಞರು ಈಗಾಗಲೇ ಸಲಹೆ ನೀಡಿದ್ದಾರೆ.
Advertisement
ಈಗಾಗಲೇ ಅಂತರ್ ಜಿಲ್ಲೆ ಓಡಾಟದಿಂದ ದೊಡ್ಡ ಕಂಟಕ ಎದುರಾಗಿದೆ. ಹಾಗಾಗಿ ಮುಂದಿನ ಹೆಜ್ಜೆ ಇಡೋವಾಗ ಎಚ್ವರಿಕೆಯಿಂದ ಇಡಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಲಾಗುತ್ತದೆ. ಜೊತೆಗೆ ಬೆಂಗಳೂರಿನಿಂದ ನಿರ್ಗಮನ/ ಆಗಮನದ ಬಗ್ಗೆ ನಿಗಾ ವಹಿಸಲು ಸೂಚನೆ ನೀಡುವ ಸಾಧ್ಯತೆ ಇದೆ.