ಕಾರವಾರ: ಉದ್ಯಮಿಗಳಿಂದ ಹಫ್ತಾ ವಸೂಲಿ ಹಾಗೂ ಜೀವ ಬೆದರಿಕೆ ಆರೋಪದಡಿ ಮುರುಡೇಶ್ವರ ಮೂಲದ ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ್ ನಾಯ್ಕನನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಜನವರಿ 2 ರಂದು ಮುರುಡೇಶ್ವರದ ಉದ್ಯಮಿ ಹಾಗೂ ನೇತ್ರಾಣಿ ಸ್ಕೂಬಾ ಡ್ರೈವಿಂಗ್ ಮಾಲೀಕ ಗಣೇಶ್ ಹರಿಕಾಂತ ಅವರು ನಡೆಸುತ್ತಿದ್ದ ನಡೆಸುತ್ತಿರುವ ಉದ್ಯಮಗಳಿಗೆ ಹಫ್ತಾ ನೀಡುವಂತೆ ಪೀಡಿಸುತ್ತಿದ್ದ. ಹಣ ನೀಡದಿದ್ದಾಗ ಮರುಡೇಶ್ವರದ ಅವರ ಕಚೇರಿಗೆ ಬಂದು ಜೀವ ಬೆದರಿಕೆ ಹಾಕಿದ್ದ.
ಈ ಹಿನ್ನೆಲೆಯಲ್ಲಿ ಜಯಂತ್ ನಾಯ್ಕ್ ವಿರುದ್ಧ ಮುರುಡೇಶ್ವರ ಠಾಣೆಯಲ್ಲಿ ಗಣೇಶ್ ಹರಿಕಾಂತ್ ದೂರು ನೀಡಿದ್ದರು. ಮುರುಡೇಶ್ವರ ಪೊಲೀಸರು ಸಿಸಿಟಿವಿ ಕ್ಯಾಮೆರಾ ಹಾಗೂ ಪ್ರತ್ಯಕ್ಷ ಸಾಕ್ಷಿ ಆಧಾರದಲ್ಲಿ ಈತನ ಮೇಲೆ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಾದ ಬಳಿಕ ನಾಪತ್ತೆಯಾಗಿದ್ದ ಈತನನನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಯಂತ್ ನಾಯ್ಕ ಮುರುಡೇಶ್ವರದ ಕೆಲವು ವರ್ತಕರು, ಅಂಗಡಿ ಮಾಲೀಕರ ಬಳಿ ಹಫ್ತಾ ವಸೂಲಿ ಮಾಡುತಿದ್ದ ಎಂದು ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಜೊತೆಗೆ ಕೋಮು ಪ್ರಚೋದನೆ, ಗೂಂಡಾಗಿರಿ ಮಾಡಿರುವ ಬಗ್ಗೆ ಸಹ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು.