ಬೆಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಹದಿಮೂರರ ಪುಟ್ಟ ಪೋರಿಯೊಬ್ಬಳು ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಿದ್ದಾಳೆ.
ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಮನಾ ಬರೆದಿರುವ ‘ದಿ ಎಕೋಸ್ ಆಫ್ ಸೋಲ್ ಪುಲ್ ಪೋಯಮ್ಸ್’ ಎಂಬ ಕವನ ಸಂಕಲನವನ್ನು ಬರೆದಿದ್ದಾಳೆ. ಇಂದು ನಗರದ ನಯನ ಸಭಾಂಗಣದಲ್ಲಿ ಬಿಡುಗಡೆಗೊಂಡಿತ್ತು. ಈ ಕವನ ಸಂಕಲನವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಲೋಕಾರ್ಪಣೆಗೊಳಿಸಿದರು.
Advertisement
Advertisement
ಸುಮಾರು 9 ತಿಂಗಳ ಕೋವಿಡ್ ಸಂದರ್ಭದಲ್ಲಿ ಈ ಕೃತಿ ರಚನೆಯಾಗಿದೆ. ಏಳನೇ ತರಗತಿ ಓದುತ್ತಿರುವ ಅಮನ ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದಾಳೆ. ಈ ಕೃತಿಯಲ್ಲಿರೋ ಹಲವು ಪದ್ಯಗಳು ಆಂಗ್ಲ, ಕನ್ನಡ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
Advertisement
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಬಹಳ ಮನ ಮುಟ್ಟುವ ರೀತಿಯಲ್ಲಿ, ಬಹಳ ಸಕಾರಾತ್ಮಕ ಚಿಂತನೆಗಳಿಂದ ಕೂಡಿರುವ ಈ ಕವನ ಸಂಗ್ರಹ ನಕಾರಾತ್ಮಕ ಅವಧಿ ಎಂದೇ ಪ್ರಸಿದ್ಧವಾಗಿರುವ ಈ ಸಮಯಕ್ಕೆ ತಕ್ಕ ಉತ್ತರ ಎಂದು ಬಣ್ಣಿಸಿದರು. ಇನ್ನು ಈ ಕವನ ಸಂಗ್ರಹವನ್ನು ಅಂತರಂಗದ ತರಂಗ ಎಂಬ ಶೀರ್ಷಿಕೆಯಡಿ ಅಮನಾ ಅವರ ತಾಯಿ ಡಾ.ಲತಾ ಕನ್ನಡಕ್ಕೆ ಅನುವಾದ ಮಾಡಿರೋದು ಮತ್ತೊಂದು ವಿಶೇಷ ಎಂದು ಸಂತಸ ವ್ಯಕ್ತಪಡಿಸಿದರು.
Advertisement
ಕಾರ್ಯಕ್ರಮದಲ್ಲಿ ಸಾಹಿತಿ ದೊಡ್ಡರಂಗೇಗೌಡ, ಪತ್ರಕರ್ತ ಜೋಗಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.