– ನಕಲಿ ಖಾತೆ ತೆರೆದು ವಂಚನೆ
– ಹಣದ ಸಹಾಯ ಮಾಡಿ ಎಂದು ವಂಚನೆ
ಹೈದರಾಬಾದ್: ದುಡ್ಡು ಮಡುವ ಉದ್ದೇಶದಿಂದ ದಂಪತಿ ಖತರ್ನಾಕ್ ಐಡಿಯಾ ಮಾಡಿ ಜೈಲು ಸೇರಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಕಂಪಾ ಹರಿದಯಾನಂದ(30) ಅನುಷಾ ಅಲಿಯಾಸ್ ಹರಿಕಾ (20) ಎಂದು ಗುರುತಿಸಲಾಗಿದೆ. ಇಬ್ಬರು ವಿಜಯವಾಡ ಮೂಲದವರಾಗಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕವಾಗಿ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಿ ಮದುವೆ ಹಾಗೂ ಡೇಟಿಂಗ್ ಹೆಸರಲ್ಲಿ ವಂಚನೆ ಮಾಡುತ್ತಿದ್ದ ದಂಪತಿಯನ್ನು ರಾಚನಕೊಂಡ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಪತಿ ಹರಿದಯಾನಂದ್ಗೆ ಆರೋಗ್ಯ ಹದಗೆಡುತ್ತಿರುವುದರಿಂದ ಕುಟುಂಬ ಸಂಕಷ್ಟಕ್ಕಿಡಾಗಿತ್ತು. ಈ ಸಮಯದಲ್ಲಿ ಪತ್ನಿ ಅನುಷಾ ಹೈದರಾಬಾದ್ನ ಡಯಾಗ್ನೋಸ್ಟಕ್ ಕೇಂದ್ರದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಆದರೆ ಸಂಬಳ ಸಾಕಾಗದ ಕಾರಣ ಹೆಚ್ಚಿನ ಹಣವನ್ನುಗಳಿಸುವ ಉದ್ದೇಶದಿಂದ ದಂಪತಿ ತಲೆಗೆ ಖತರ್ನಾಕ್ ಯೋಚನೆ ಮಾಡಿದ್ದಾರೆ.
Advertisement
ಡೇಟಿಂಗ್ ಆ್ಯಪ್ನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ನಂತರ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಚೆಂದದ ಹುಡುಗಿಯ ಫೋಟೋವನ್ನು ನಕಲಿ ಖಾತೆಯ ಪ್ರೋಪೈಲ್ಗೆ ಅಪ್ಲೋಡ್ ಮಾಡಿದ್ದಾರೆ. ಹುಡುಗಿಯ ಫೋಟೋವನ್ನು ನೋಡಿದ ಹಲವರು ಮೆಸೇಜ್ ಮಾಡಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಶ್ರೀಮಂತರೇ ಹೆಚ್ಚಾಗಿ ಮೆಸೇಜ್ ಮಾಡಲು ಪ್ರಾರಂಭಿಸಿದ್ದಾರೆ.
Advertisement
ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದಾನೆ. ರೋಸಾರಿಯೋ ಎಂಬ ನಕಲಿ ಖಾತೆಯಿಂದ ಸಂದೇಶ ಕಳುಹಿಸುತ್ತಿದ್ದವಳು ಒಳ್ಳೆಯವಳು ಎಂದು ನಂಬಿದ್ದಾನೆ. ಹೀಗೆ ಮಾತನಾಡುತ್ತಾ ಇಬ್ಬರ ನಡುವೆ ಸಲುಗೆ ಹೆಚ್ಚಾಗಿದೆ. ನನ್ನ ತಾಯಿ ಆರೋಗ್ಯ ಸರಿಯಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗೆ ಹಣ ಬೇಕು ಸಹಾಯ ಮಾಡಿ ಎಂದು ಕೇಳಿದ್ದಾಳೆ. ಅದನ್ನು ನಂಬಿದ ಶ್ರೀಮಂತ ವ್ಯಕ್ತಿ ಹಣವನ್ನು ಕಳುಹಿಸಿದ್ದಾನೆ. ಹೀಗೆ ಆತನಿಂದ ಸುಮಾರು 21 ಲಕ್ಷರೂಪಾಯಿ ಹಣವನ್ನು ಪಡೆದಿದ್ದಾರೆ.
ನಂತರ ಹಣ ನೀಡಿದ ವ್ಯಕ್ತಿ ಇಬ್ಬರು ಮದವೆಯಾಗೋಣ ಎಂದು ಹೇಳಿದ್ದಾನೆ. ಆದರೆ ಮದುವೆಯ ವಿಷಯವನ್ನು ಮರೆಮಾಚುವಂತೆ ಮಾತನಾಡಿದ್ದಾಳೆ. ಇದರಿಂದ ಅನುಮಾನಗೊಂಡ ವ್ಯಕ್ತಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಖತರ್ನಾಕ್ ದಂಪತಿಗೆ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.