– ವರನಿಂದ ವಧುದಕ್ಷಿಣೆ ಪಡೆಯುತ್ತಿದ್ದ ತಾಯಿ
– ಪತಿಯಿಂದ ಹಲ್ಲೆಗೊಳಾದ ಬಾಲಕಿಯಿಂದ ದೂರು
ಭೋಪಾಲ್: ಹಣದಾಸೆಗಾಗಿ ತಾಯಿಯೇ ತನ್ನ ಮಗಳಿಗೆ ಮೂರನೇ ಮದುವೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ ಮಂಡಲಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ದೆಹಲಿಯಲ್ಲಿರುವ ಮೂರನೇ ಪತಿಯಿಂದ ಹಲ್ಲೆಗೊಳಗಾದ ಬಾಲಕಿ ಪೊಲೀಸ್ ಸಹಾಯವಾಣಿ 100ಕ್ಕೆ ಕಾಲ್ ಮಾಡಿ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಳು.
Advertisement
ಕರೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಬಾಲಕಿಯನ್ನ ರಕ್ಷಿಸಿ ಪ್ರಕರಣವನ್ನ ಮಂಡಲಾ ಪೊಲೀಸರಿಗೆ ವರ್ಗಾಯಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಲಾ ಪೊಲೀಸರು ಬಾಲಕಿಯ ತಾಯಿ, ಪತಿ ಸೇರಿದಂತೆ ಐವರನ್ನ ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.
Advertisement
Advertisement
ಬಾಲಕಿಯನ್ನ ರಕ್ಷಿಸಿದ ಬಳಿಕ ಪೊಲೀಸರು ಆಕೆಯಿಂದ ಹೇಳಿಕೆಯನ್ನ ದಾಖಲಿಸಿಕೊಂಡಿದ್ದರು. ಮದುವೆ ಸೇರಿದಂತೆ ತಾಯಿ ಕುಟುಂಬವೂ ಮಂಡಲಾದಲ್ಲಿರುವದರಿಂದ ಪ್ರಕರಣವನ್ನ ವರ್ಗಾಯಿಸಲಾಗಿದೆ. ಈ ಹಿಂದೆಯೂ ತಾಯಿ ತನಗೆ ಎರಡು ಬಾರಿ ಮದುವೆ ಮಾಡಿಸಿದ್ದಳು. ಮೂರನೇ ಮದುವೆಗಾಗಿ ಯುವಕನಿಂದ 80 ಸಾವಿರ ರೂ. ಹಣವನ್ನ ವಧುದಕ್ಷಿಣೆ ರೂಪದಲ್ಲಿ ಪಡೆದುಕೊಂಡಿದ್ದಾಳೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.
Advertisement
ಮಂಡಲಾದಿಂದ ದೆಹಲಿಗೆ ಬಂದ ಬಾಲಕಿ ಮೇಲೆ ಮೂರನೇ ಪತಿ ಹಲ್ಲೆ ನಡೆಸುತ್ತಿದ್ದನು. ಇದರಿಂದ ನೊಂದ ಬಾಲಕಿ 100 ಸಂಖ್ಯೆಗೆ ಕರೆ ಮಾಡಿದ್ದಳು. ಈ ಮೊದಲು ಬಾಲಕಿಯನ್ನ ಮದುವೆಯಾಗಿದ್ದ ಇಬ್ಬರು, ತಾಯಿ ಮತ್ತು ಮೂರನೇ ಪತಿ ಸೇರಿದಂತೆ ಒಟ್ಟು ಐವರನ್ನ ಬಂಧಿಸಲಾಗಿದೆ. ಮದುವೆಗೆ ಸಹಾಯ ಮಾಡಿದ್ದ ಇನ್ನಿಬ್ಬರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಂಡಲಾದಿಂದ ಕಾಲ್ಕಿತ್ತಿದ್ದಾರೆ.