ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಇಲಾಖೆ ಸ್ವಚ್ಛ ಸರ್ವೇಕ್ಷಣ್-2020 ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, 10 ಲಕ್ಷದೊಳಗಿನ ಜನಸಂಖ್ಯೆಯುಳ್ಳ ಸ್ವಚ್ಛ ನಗರಗಳ ವಿಭಾಗದಲ್ಲಿ ಮೈಸೂರು ಮೊದಲ ಸ್ಥಾನ ಪಡೆದಿದೆ.
ದೇಶದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಗರಿಮೆಗೆ ಸತತ ನಾಲ್ಕನೇ ಬಾರಿ ಮಧ್ಯಪ್ರದೇಶದ ಇಂದೋರ್ ಪಾತ್ರವಾಗಿದೆ. ಎರಡನೇ ಸ್ಥಾನದಲ್ಲಿ ಸೂರತ್, ಮೂರನೇ ಸ್ಥಾನದಲ್ಲಿ ನವೀ ಮುಂಬೈ ಇದೆ.
Advertisement
ಸ್ವಚ್ಛ ಸರ್ವೇಕ್ಷಣ್- 2020ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರು ಪೌರ ಕಾರ್ಮಿಕರ ಜತೆ ಸಂವಾದ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿರುವ ಸ್ವಚ್ಛ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.#SwachhSurvekshan2020 pic.twitter.com/eA4MmwSbRm
— Pratap Simha (@mepratap) August 20, 2020
Advertisement
ಟಾಪ್ 20 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ನಗರ ಸ್ಥಾನ ಪಡೆದಿಲ್ಲ. ಆದರೆ 10 ಲಕ್ಷದೊಳಗಿನ ಜನಸಂಖ್ಯೆಯುಳ್ಳ ಸ್ವಚ್ಛ ನಗರಗಳ ವಿಭಾಗದಲ್ಲಿ ಮೈಸೂರು ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ನಗರಕ್ಕೆ ಅತ್ಯುತ್ತಮ ಸ್ವಸುಸ್ಥಿರ ನಗರ ಪ್ರಶಸ್ತಿ ದೊರೆತಿದೆ.
Advertisement
ಸ್ವಚ್ಛ ನಗರಗಳ ಪಟ್ಟಿ ಪ್ರಕಟಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ ಮೈಸೂರಿನ ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದ್ರು. ಈ ವೇಳೆ ಮಂಜುಳಾ ನಂಜುಂಡ ಸ್ವಾಮಿ ಅವರು ಸಮುದಾಯಕ್ಕೆ ಟಾಯ್ಲೇಟ್ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಂಡರು. ಬಳಿಕ ಸಚಿವರು ಪೌರ ಕಾರ್ಮಿಕ ನಂಜುಂಡ ಸ್ವಾಮಿ ಜೊತೆ ಮಾತುಕತೆ ನಡೆಸಿದರು. ನಂಜುಂಡ ಸ್ವಾಮಿ ಕೊರೊನಾ ಪಾಸಿಟಿವ್ ಆಗಿ ಗುಣಮುಖರಾಗಿದ್ದಾರೆ. ಕೊರೊನಾದಿಂದ ಪಾಸಿಟಿವ್ ಆಗಿ ಮತ್ತೆ ಬಂದು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ನಂಜುಂಡ ಸ್ವಾಮಿ ಮಾಹಿತಿಯಿಂದ ಸಚಿವರು ಪುಲ್ ಖುಷಿಯಾದರು. ಸಚಿವರ ತಂಡ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದೆ.
Advertisement
#NammaMysuru has been ranked first cleanest city in the country (3-10 lakhs population category) during the #SwachhSurvekshan2020, special thanks to our hardworking pourakarmikas, volunteers & all Mysureans who have contributed for #SwachhBharat. Congratulations!! #Mysuru pic.twitter.com/uzBYw93Lnv
— Pratap Simha (@mepratap) August 20, 2020