ಕೋಲಾರ: ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟು ಜನರು ಬೇರೆ ಬೇರೆ ರೀತಿಯಲ್ಲಿ ದಾನ ಧರ್ಮ ಮಾಡಿ ಜನರಿಗೆ ನೆರವಾಗುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯ ಮಾಜಿ ಶಾಸಕ ವೈ.ಸಂಪಂಗಿ ಕೆಜಿಎಫ್ನ ಸರ್ಕಾರಿ ಆಸ್ಪತ್ರೆಗೆ ಕೊರೊನಾ ವಾರಿಯರ್ಸ್ ಹಾಗೂ ಬೇಕಾದ ಆಕ್ಸಿಜನ್ ಸಿಲಿಂಡರ್ನ್ನು ಸ್ವತಂ ಖರ್ಚಿನಲ್ಲಿ ನೀಡುವ ಮೂಲಕ ನೆರವಾಗಿದ್ದಾರೆ.
Advertisement
ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ಅವಶ್ಯಕವಾಗಿ ಬೇಕಾಗಿದ್ದ 16 ಆಕ್ಸಿಜನ್ ಸಿಲಿಂಡರ್ ಹಾಗೂ 20 ಶುಶ್ರೂಷಕಿಯರನ್ನು ನೇಮಕ ಮಾಡಿ ಕೊರೊನಾ ಸಂಕಷ್ಟಕ್ಕೆ ಮಿಡಿದಿದ್ದಾರೆ. ಸ್ವಂತ ಹಣದಿಂದ 20 ಮಂದಿ ಶುಶ್ರೂಷಕಿಯರಿಗೆ ಸಂಬಳ ನೀಡುವ ಮೂಲಕ ಆಸ್ಪತ್ರೆಗೆ ಬೇಕಾದ ಕೊರೊನಾ ವಾರಿಯರ್ಸ್ ಹಾಗೂ ಅವರಿಗೆ ಬೇಕಾದ ದಿನಸಿ ಕಿಟ್ಗಳನ್ನು ಇಂದು ವಿತರಣೆ ಮಾಡಲಾಯಿತು.
Advertisement
Advertisement
ಇಂದಿನಿಂದ ಕೋವಿಡ್ ಕರ್ತವ್ಯ ನಿರ್ವಸಲಿರುವ ನುರಿತ 20 ಶುಶ್ರೂಷಕಿಯರು ಹಾಗೂ ಅವರಿಗೆ ಬೇಕಾದ ದಿನಸಿ ಕಿಟ್ಗಳ ಜೊತೆಗೆ 16 ಆಕ್ಸಿಜನ್ ಸಿಲೆಂಡರ್ ಗಳನ್ನು ಆಸ್ಪತ್ರೆಗೆ ಸಂಸದ ಮುನಿಸ್ವಾಮಿ ಅವರ ಸಮ್ಮುಖದಲ್ಲಿ ನೀಡಲಾಯಿತು. ಕಳೆದ ಹಲವು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಸೇರಿದಂತೆ ಸಾಕಷ್ಟು ಜನರಿಗೆ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದರು ಇದರಿಂದ ಎಚ್ಚೆತ್ತ ಸಂಪಂಗಿ ಅವರು ಇಂದು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಸರ್ಕಾರಿ ಆಸ್ಪತ್ರೆಗೆ ಅವಶ್ಯಕವಾಗಿ ಬೇಕಾದ ಆಕ್ಸಿಜನ್ ಸಿಲಿಂಡರ್ ಹಾಗೂ ಕೊರೊನಾ ವಾರಿಯರ್ಸ್ ಗಳನ್ನು ನೇಮಕ ಮಾಡುವ ಮೂಲಕ ಕೊರೊನಾ ಕಷ್ಟ ಕಾಲದಲ್ಲಿ ನೆರವಾಗಿದ್ದಾರೆ.
Advertisement