ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಸ್ಮಾರ್ಟ್ಫೋನ್ಗಾಗಿ ಕಳ್ಳತನಕ್ಕೆ ಇಳಿದು 4 ಲಕ್ಷ ರೂ. ಅಧಿಕ ಹಣವನ್ನು ಕದ್ದು ಸಿಕ್ಕಿಬಿದ್ದ ಘಟನೆ ನಗರದಲ್ಲಿ ನಡೆದಿದೆ.
ಸ್ನೇಹಿತರು ಹಾಗೂ ಬಾಲಕನಿದ್ದ ಪ್ರದೇಶದ ಎಲ್ಲ ಹುಡುಗರು ದುಬಾರಿ ಫೋನ್ ಬಳಸಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಅವರನ್ನು ನೋಡಿ ತಾನು ಫೋನ್ ತೆಗೆದುಕೊಳ್ಳಲು ಬಾಲಕನ ಸರ್ವ ಪ್ರಯತ್ನ ನಡೆಸಿದ್ದ. ಬಳಿಕ ಕಳ್ಳತನಕ್ಕೆ ಇಳಿದಿದ್ದ. ಹೀಗೆ ಬೆಂಗಳೂರಿನ ಪ್ರತಿಷ್ಠಿತ ಏರಿಯಾದ ನಾಲ್ಕು ಅಂಗಡಿಯಲ್ಲಿ ಕಳ್ಳತನ ಮಾಡಿದ್ದಾನೆ.
Advertisement
Advertisement
ಬಾಲಕ ಜೂನ್ 9ರಂದು ಬೆಂಗಳೂರಿನ ವಿಠ್ಠಲ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆಯ ನಾಲ್ಕು ಅಂಗಡಿಗಳ ಶೆಟರ್ ಮುರಿದು ಬಾಲಕ ಕಳ್ಳತನ ಮಾಡಿದ್ದಾನೆ. ಒಂದು ಅಂಗಡಿಯಲ್ಲಿ ನಾಲ್ಕು ಸಾವಿರ, ಮತ್ತೊಂದು ಅಂಗಡಿಯಲ್ಲಿ 4 ಲಕ್ಷ ರೂ. ಎಗರಿಸಿದ್ದಾನೆ.
Advertisement
ಈ ಸಂಬಂಧ ಅಂಗಡಿ ಮಾಲೀಕರು ಸಿಸಿಟಿವಿ ವಿಡಿಯೋ ಸಹಿತ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಪ್ರಾಪ್ತನನ್ನು ಪತ್ತೆ ಹಚ್ಚಿ ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ.