ಶ್ರೀನಗರ: ಜಮ್ಮು ಜಿಲ್ಲೆಯ ಗಡಿಯಲ್ಲಿ ಸುಮಾರು 5 ಕೆ.ಜಿ.ತೂಕದ ಸುಧಾರಿತ ಸ್ಫೋಟಕ ಸಾಧನ(ಐಇಡಿ)ದ ವಸ್ತುಗಳನ್ನು ಸಾಗಿಸುತ್ತಿದ್ದ ಡ್ರೋನ್ನ್ನು ಹೊಡೆದುರುಳಿಸುವ ಮೂಲಕ ಜಮ್ಮು ಕಾಶ್ಮೀರ ಪೊಲೀಸರು ಗಡಿಯಾಚೆಗಿನ ಭಯೋತ್ಪಾದಕರ ಸಂಚನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಅಂತರಾಷ್ಟ್ರೀಯ ಗಡಿ(ಐಬಿ)ಯ ಕನ್ಹಚಾಕ್ ಪ್ರದೇಶದಲ್ಲಿ ಡ್ರೋನ್ ಹಾರಾಡುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ನ ಕ್ವಿಕ್ ರಿಯಾಕ್ಷನ್ ಟೀಮ್(ಕ್ಯೂಟಿಆರ್) ಕಾರ್ಯಪ್ರವೃತ್ತರಾಗಿದ್ದಾರೆ. ಬಳಿ ಆ್ಯಂಟಿ ಡ್ರೋನ್ ತಂತ್ರದ ಮೂಲಕ ಡ್ರೋನ್ನ್ನು ಹೊಡೆದುರುಳಿಸಿದ್ದಾರೆ. ಸ್ಫೋಟಕ ಹೊತ್ತ ಡ್ರೋನ್ ಅಂತರಾಷ್ಟ್ರೀಯ ಗಡಿ ಗಡಿಯಲ್ಲಿ 7 ರಿಂದ 8 ಕಿ.ಮೀ. ಒಳಭಾಗದಲ್ಲಿ ಹಾರಾಟ ನಡೆಸುತ್ತಿತ್ತು ಎಂದು ಮೂಲಗಳಿಂದ ತಿಳುದು ಬಂದಿದೆ.
Advertisement
Advertisement
ಮಧ್ಯ ರಾತ್ರಿ 1 ಗಂಟೆಗೆ ಡ್ರೋನ್ ಹೊಡೆದುರುಳಿಸಿದಾಗ ಐಇಡಿ ಇಳಿಸಲು ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿತ್ತು. ಡ್ರೋನ್ನಲ್ಲಿ 5 ಕೆ.ಜಿ. ಐಇಡಿ ಪರಿಕರಗಳು ತುಂಬಿದ್ದವು. ಇವು ಸೆಮಿ ಸೆಂಬಲ್ಡ್ ಸ್ಥಿತಿಯಲ್ಲಿದ್ದವು. ಕೇವಲ ವೈರ್ ಕನೆಕ್ಷನ್ ನೀಡಿದ್ದರೆ ಸ್ಪೋಟವಾಗುವ ಸ್ಥಿತಿಯಲ್ಲಿ ಇತ್ತು ಎಂದು ಎಡಿಜಿಪಿ ಮುಖೇಶ್ ಸಿಂಗ್ ತಿಳಿಸಿದ್ದಾರೆ.
Advertisement
ಪ್ರಾಥಮಿಕ ತನಿಖೆ ಪ್ರಕಾರ ಈ ಡ್ರೋನ್ ಹೆಕ್ಸಾ ಎಂ-ಕಾಪ್ಟರ್ ಆಗಿದ್ದು, ಆರು ರೆಕ್ಕೆಗಳಿತ್ತು. ಜಿಪಿಎಸ್ ಡಿವೈಸ್ ಹಾಗೂ ಫ್ಲೈಟ್ ಕಂಟ್ರೋಲರ್ನ್ನು ಸಹ ಹೊಂದಿತ್ತು. ಸಂಭವನೀಯ ಐಇಡಿ ಸ್ಫೋಟವನ್ನು ತಡೆಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ತಥುವಾ ಬಳಿ ಹೊಡೆದುರುಳಿಸಿದ್ದ ಡ್ರೋನ್ ಹಾಗೂ ಇದೀಗ ಹೊಡೆದುರುಳಿಸಿರುವ ಡ್ರೋನ್ನ ಸೀರಿಯಲ್ ನಂಬರ್ನಲ್ಲಿ ಕೇವಲ ಒಂದು ಅಂಕಿ ಮಾತ್ರ ವ್ಯತ್ಯಾಸವಿದೆ. ಗಡಿಯುದ್ದಕ್ಕೂ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೈಬಾ(ಎಲ್ಇಟಿ) ಹಾಗೂ ಜೈಶ್-ಎ-ಮೊಹಮ್ಮದ್(ಜೆಇಎಂ) ವಿಮಾನ ನಿಯಂತ್ರಕಗಳನ್ನು ಸ್ವಾಧೀನಪಡಿಸಿಕೊಂಡಿವೆ. ಅಲ್ಲದೆ ಶಸ್ತ್ರಾಸ್ತ್ರ ಹಾಗೂ ಐಇಡಿಗಳನ್ನು ಹೊಂಡಿರುವ ಡ್ರೋನ್ಗಳನ್ನು ಭಾರತದ ಕಡೆಗೆ ಕಳುಹಿಸುತ್ತಿದೆ ಎಂಬುದು ಇದು ತೋರಿಸುತ್ತದೆ ಎಂದು ಎಡಿಜಿಪಿ ಹೇಳಿದ್ದಾರೆ.