ಉಡುಪಿ: ಮಹಾಮಾರಿ ಕೊರೊನಾದಿಂದ ದೇಶದ್ಯಾಂತ ಜನರು ಕಷ್ಟಪಡುವಂತಹ ಪರಿಸ್ಥಿತಿ ಎದುರಾಗಿದೆ. ಆದರೆ ಈ ಮಧ್ಯೆ ಕೊರೊನಾದಿಂದ ಸ್ಪೈನ್ ಮಹಿಳೆಯೊಬ್ಬರು ಭಾರತದ ಸಂಸ್ಕೃತಿಯನ್ನು ಕಲಿತಿದ್ದಾರೆ.
ಸ್ಪೈನ್ ಮಹಿಳೆ ಥೆರೆಸಾ ಕೊರೊನಾದಿಂದ ಭಾರತದ ಸಂಸ್ಕೃತಿ ಕಲಿತಿದ್ದಾರೆ. ತವರು ದೇಶ ಬಿಟ್ಟು ಭಾರತಕ್ಕೆ ಬಂದ ಥೆರೆಸಾ ಭಾರತವನ್ನೇ ತವರು ಮಾಡಿಕೊಂಡಿದ್ದಾರೆ. ಜಿಲ್ಲೆಯ ಬೈಂದೂರಿನಲ್ಲಿ ನೆಲೆಸಿರುವ ಈಕೆ ಸ್ಪೈನ್ ದೇಶದವರು. ಆದರೆ ಕರಾವಳಿ ಭಾಷೆ, ಕುಂದಾಪುರದ ಸಂಸ್ಕೃತಿಗೆ ಲಾಕ್ಡೌನ್ ನಡುವೆ ಒಗ್ಗಿದ್ದಾರೆ. ಸ್ನೇಹಿತರಾದ ಕೃಷ್ಣ ಪೂಜಾರಿ ಮನೆಯಲ್ಲಿ ಆಶ್ರಯ ಪಡೆದಿರುವ ಈಕೆ ನಾಲ್ಕು ತಿಂಗಳಲ್ಲಿ ಅಪ್ಪಟ ಭಾರತೀಯಳೇ ಆಗಿಬಿಟ್ಟಿದ್ದಾರೆ.
Advertisement
Advertisement
ಥೆರೆಸಾ ಸ್ಪೈನ್ ದೇಶಕ್ಕೆ ಹೊರಟು ನಿಂತಾಗ ಭಾರತದಲ್ಲಿ ಲಾಕ್ಡೌನ್ ಆರಂಭವಾಯಿತು. ಹಾಗಾಗಿ ಸ್ನೇಹಿತರಾದ ಕೃಷ್ಣ ಪೂಜಾರಿ ಅವರ ಮನೆಯಲ್ಲೇ ಉಳಿದುಕೊಂಡಿದ್ದರು. ಸಮಯದ ಸದ್ಬಳಕೆ ಮಾಡಿಕೊಂಡು ಹಳ್ಳಿ ಹುಡುಗಿಯರ ರೀತಿಯಲ್ಲಿ ಗ್ರಾಮೀಣ ಬದುಕಿಗೆ ಒಗ್ಗಿಕೊಂಡಿದ್ದಾರೆ.
Advertisement
Advertisement
ಭತ್ತದ ನೇಜಿ ನೆಡುವುದು, ಹಾಲು ಕರೆಯೋದು, ಗೊಬ್ಬರ ಬುಟ್ಟಿ ತುಂಬುವುದು, ರಂಗೋಲಿ ಹಾಕುವುದು ಎಲ್ಲವನ್ನು ಮಾಡುತ್ತಾರೆ. ಜೊತೆಗೆ ತೆಂಗಿನ ಸೋಗೆ ನೇಯುವುದು, ಇಂಡಿಯನ್ ಸ್ಟೈಲ್ನಲ್ಲಿ ಬಟ್ಟೆ ತೊಳೆಯೋದು, ಅಡುಗೆ ಮಾಡೋದು ಅಭ್ಯಾಸವಾಗಿದೆ. ನಮ್ಮ ಮನೆಯವರಿಂದ ಪ್ರತಿಯೊಂದೂ ಕೆಲಸ ಕಲಿತಿದ್ದಾರೆ ಎಂದು ಆಶ್ರಯ ನೀಡಿದ ಕೃಷ್ಣ ಪೂಜಾರಿ ಸಂತಸದಿಂದ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಿದ್ದು, ಸ್ಪೈನ್ಗೆ ಥರೆಸಾ ಹೊರಡುವ ಸಮಯವಾಗಿದೆ. ಆದರೆ ಭಾರತ ಬಿಟ್ಟು ಹೋಗಲು ಮನಸ್ಸಿಲ್ಲ ಎಂದು ಥೆರೆಸಾ ಬೇಸರದಿಂದ ಹೇಳುತ್ತಿದ್ದಾರೆ.