ಚಿಕ್ಕಬಳ್ಳಾಪುರ : ಸೋಮವಾರದಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಇಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಚಿವರು, ಶನಿವಾರ ಕೇಂದ್ರದಿಂದಡ ರಾಜ್ಯಕ್ಕೆ 13 ಲಕ್ಷದ 90 ಸಾವಿರ ಕೋವಿಡ್-19 ಲಸಿಕೆ ಬರಲಿದ್ದು, ಸೋಮವಾರದಿಂದ ಲಸಿಕೆ ಹಾಕಲಿದ್ದೇವೆ. ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲಿದ್ದೇವೆ ಎಂದರು.
Advertisement
Advertisement
ಕೋವಿಡ್-19 ಕಂಟ್ರೋಲ್ ಮಾಡೋದ್ರಲ್ಲಿ ಭಾರತ ಯಶಸ್ವಿಯಾಗಿದೆ. ಇಡೀ ದೇಶದಲ್ಲಿ 9000 ಸಕ್ರಿಯ ಪ್ರಕರಣಗಳಿದ್ದು, ಶೇ.98ರಷ್ಟು ಜನ ಗುಣಮುಖರಾಗುತ್ತಿದ್ದಾರೆ. ಶೇ.1.2 ರಿಂದ ಶೇ.1.3 ರಷ್ಡು ಸಾವಿನ ಪ್ರಮಾಣ ಆಗಿದೆ. ಈ ಅಂಕಿ ಅಂಶಗಳೇ ರಾಜ್ಯಸರ್ಕಾರ ಯಶಸ್ವಿಯಾಗಿ ಕೊರೊನಾ ನಿರ್ವಹಣೆ ಮಾಡಿದೆ ಅನ್ನೋದಕ್ಕೆ ನಿದರ್ಶನ. ಲಸಿಕೆಯ ವಿವರಗಳನ್ನ ಸಂಜೆಯೊಳಗೆ ತಿಳಿಸುತ್ತೇನೆ ಎಂದು ಮಾಹಿತಿ ನೀಡಿದರು.
Advertisement
ಕೆಲ ದಿನಗಳಲ್ಲಿ ಭಾರತೀಯರ ಕೈ ಸೇರಲಿದೆ ಲಸಿಕೆ: ಹರ್ಷವರ್ಧನ್https://t.co/iTOl09jXRO#CoronaVaccine #CoronaVirus #COVID19 #HarshVardhan #KannadaNews
— PublicTV (@publictvnews) January 8, 2021