– ಜಿಲ್ಲೆಗೂ ತಗುಲತ್ತಾ ಮುಂಬೈ ಕಂಠಕ
– ಜಿಲ್ಲಾಡಳಿತಕ್ಕೆ ವಿಷಯವೇ ಗೊತ್ತಿಲ್ಲ
ಗದಗ: ಸೋಮವಾರದಿಂದ ಗದಗ-ಮುಂಬೈ ಎಕ್ಸ್‌ಪ್ರೆಸ್ ಡೈಲಿ ರೈಲು ಆರಂಭವಾಗಲಿದ್ದು, ಮುಂಬೈ ಕಂಠಕ ಗದಗ ಜಿಲ್ಲೆಗೂ ತಗುಲುತ್ತಾ ಎಂಬ ಭಯ, ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ.
Advertisement
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಬೆನ್ನಲ್ಲೆ ರೈಲು ಓಡಾಟ ಜಿಲ್ಲೆಗೆ ಮತ್ತಷ್ಟು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35 ಇದ್ದು, ಇದರಲ್ಲಿ ಹೊರರಾಜ್ಯದಿಂದ ಬಂದವರ ಸಂಖ್ಯೆಯೇ ಹೆಚ್ಚಿದೆ. ಈ ಸಂದರ್ಭದಲ್ಲಿ ಮುಂಬೈನಿಂದ ಪ್ರತಿದಿನ ರೈಲು ಓಡಾಡುವ ವಿಷಯ ಆಘಾತ ಮೂಡಿಸಿದೆ. ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ಜೂನ್ 1 ರಿಂದ ಡೈಲಿ ರೈಲು ಓಡಾಟ ಆರಂಭವಾಗಲಿದ್ದು, ಸೋಮವಾರ ಮುಂಬೈ ಬಿಡಲಿರುವ ರೈಲು ಮಂಗಳವಾರ ಗದಗ ತಲುಪಲಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ಪತ್ರ ಬಿಡುಗಡೆ ಮಾಡಿದೆ.
Advertisement
Advertisement
ಗದಗ ಜಿಲ್ಲಾಡಳಿತಕ್ಕೆ ರೈಲು ಓಡಾಟದ ಮಾಹಿತಿ ಇಲ್ಲದೇ ಇರುವುದು ವಿಪರ್ಯಾಸ. ಜಿಲ್ಲಾಡಳಿತಕ್ಕೆ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ. ರೈಲು ಬರುವ ಬಗ್ಗೆ ಮಾಹಿತಿ ಬಂದಿಲ್ಲ ಅಂತ ಗದಗ ಡಿಸಿ ಎಂ.ಜಿ ಹಿರೇಮಠ ಪಬ್ಲಿಕ್ ಟಿವಿ ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಯಾಣಿಕರು ಎಷ್ಟು ಜನ ಬರ್ತಾರೆ. ಯಾವತ್ತು ಬರ್ತಾರೆ ಎಂಬ ಮಾಹಿತಿ ರೈಲ್ವೆ ಇಲಾಖೆಯಿಂದ ನಮಗೆ ಇನ್ನು ಮಾಹಿತಿ ಬಂದಿಲ್ಲ. ಮಾಹಿತಿ ಬಂದ ನಂತರ ಪ್ರಯಾಣಿಕರ ಕ್ವಾರಂಟೈನ್ ಬಗ್ಗೆ ಚಿಂತನೆ ಮಾಡುತ್ತೇವೆ. ಒಂದು ವೇಳೆ ರೈಲ್ವೆ ಇಲಾಖೆ ಮಾಹಿತಿ ತಡವಾಗಿ ಬಂದರೂ, ಸರ್ಕಾರದ ಕೆಲವು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವ ಕೆಲಸ ಮಾಡಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಹೇಳುತ್ತಾರೆ.