– ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆ
ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಾಟೆ ಪ್ರಕರಣಕ್ಕೆ ಹೊಸ ತಿರುವ ಸಿಕ್ಕಿದೆ. ಕಾರ್ಪೋರೇಟರ್ ಸಂಪತ್ ರಾಜ್ ಸೋದರಳಿಯನ ಮೂಲಕ ಗಲಾಟೆ ಮಾಡಿಸಿದ್ರಾ ಅನ್ನೋ ಅನುಮಾನಗಳು ದಟ್ಟವಾಗ್ತಿವೆ. ಗಲಭೆಗೆ ಸಂಬಂಧಿಸಿದಂತೆ ಕಾರ್ಪೋರೇಟರ್ ಸಂಪತ್ ರಾಜ್ ಸೋದರಳಿಯ ಅರುಣ್ ನನ್ನು ಸಿಸಿವಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಅರುಣ್ ನೀಡಿರುವ ಹೇಳಿಕೆಗಳು ಸಂಪತ್ರಾಜ್ ಅವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
Advertisement
ಸಿಸಿಬಿ ಪೊಲೀಸರ ಮುಂದೆ ಅರುಣ್ ಮಂಡಿಯೂರಿದ್ದಾನೆ ಎನ್ನಲಾಗಿದ್ದು, ಗಲಭೆಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ಒಂದೊಂದಾಗಿ ಬಾಯಿಬಿಟ್ಟಿದ್ದಾನೆ. ಅರುಣ್ ಗಲಭೆ ನಡೆದಾಗ ನಡೆದ ಫೋನ್ ಸಂಭಾಷಣೆಯ ವಿಚಾರ ಅರುಣ್ ಒಪ್ಪಿಕೊಂಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದೀಗ ಸಿಸಿಬಿ ಪೊಲೀಸರು ಅರುಣ್ ಹೇಳಿಕೆಯನ್ನಾಧರಿಸಿ ಟೆಕ್ನಿಕಲ್ ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿದ್ದಾರೆ. ಅರುಣ್ ಹೇಳಿಕೆಗಳು ಸಂಪತ್ ರಾಜ್ಗೆ ಮುಳುವಾಗಲಿದೆ ಎನ್ನಲಾಗಿದೆ.
Advertisement
Advertisement
ಅರುಣ್ ಬಂಧನ ಖಂಡಿಸಿ ಆತನ ಸಂಬಂಧಿಕರು ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದರು. ಕಾರಣ ಇಲ್ಲದೆಯೇ ಅರುಣ್ನನ್ನ ಬಂಧಿಸಿ ಚಿತ್ರಹಿಂಸೆ ಕೊಡುತ್ತಿದ್ದಾರೆ. ಕೂಡಲೇ ಬಿಡುಗಡೆ ಮಾಡುವಂತೆ ಆಕ್ರೋಶ ಹೊರಹಾಕಿದರು.