ಕಲಬುರಗಿ: ಸೋಂಕಿತ ತಾಯಿ ಮುಖ ನೋಡಲು ಬಿಟ್ಟಿಲ್ಲ ಎಂದು ಮನನೊಂದು ಆಸ್ಪತ್ರೆಯ ಕಟ್ಟಡದ ಮೇಲೇರಿದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
Advertisement
ಕಳೆದ 12 ದಿನಗಳಿಂದ ಯುವಕನ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಆರೋಗ್ಯ ಸ್ಥಿತಿ ಬಗ್ಗೆ ಸರಿಯಾದ ಮಾಹಿತಿ ಸಿಗದ ಹಿನ್ನಲೆ ಖಿನ್ನತೆಗೆ ಒಳಗಾಗಿರುವ ಯುವಕ ಆತ್ಮಹತ್ಯೆಗೆಯತ್ನಿಸಿದ್ದನು.
Advertisement
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬೆಳಗ್ಗೆ ಐದು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮೇಲೇರಿ ಆತ್ಮಹತ್ಯೆಗೆ ಯುವಕ ಯತ್ನಿಸಿದ್ದಾನೆ. ಯುವಕನ ತಾಯಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. 12 ದಿನಗಳಿಂದ ಆಸ್ಪತ್ರೆಯಲ್ಲಿ ಯುವಕನ ತಾಯಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ತಾಯಿ ಆರೋಗ್ಯ ಕುರಿತಾಗಿ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ತಾಯಿ ಮುಖ ನೋಡಲು ಬಿಟ್ಟಿರಲಿಲ್ಲ ಹೀಗಾಗಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕರೊನಾ ಸೊಂಕಿತ ತಾಯಿಯ ಮುಖ ನೋಡಲು ಬಿಡುವ ಭರವಸೆ ನೀಡಿದ ಬಳಿಕ ಆಸ್ಪತ್ರೆ ಕಟ್ಟಡದಿಂದ ಕೆಳಗಿಳಿದಿದ್ದಾನೆ.
Advertisement