– ಸೋಂಕಿತರಿಂದ 5 ಲಕ್ಷ ಪಡೆದಿರುವ ಬಗ್ಗೆ ಮಾಹಿತಿ
– ಹಣ ಮರಳಿಸುವಂತೆ ತಾಕೀತು
ಬೆಂಗಳೂರು: ಕೊರೊನಾ ಸೋಂಕಿತರಿಂದ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದ ಆಸ್ಪತ್ರೆಗಳ ಮೇಲೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಇಂದೂ ಸಹ ಹಲವು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ.
ಎಡಿಜಿಪಿ ಸುನೀಲ್ ಅಗರ್ವಾಲ್, ಐಎಎಸ್ ಉಮಾ ಮಹಾದೇವನ್ ತಂಡದಿಂದ ಪರಿಶೀಲನೆ ನಡೆಸಲಾಗಿದ್ದು, ಸರ್ಜಾಪುರ ರಸ್ತೆಯ ಕೊಲಂಬಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಂದ ಹೆಚ್ಚುವರಿ ಹಣ ಪಡೆದಿರುವುದು ಪತ್ತೆಯಾಗಿದೆ. 14 ಸೋಂಕಿತರಿಂದ 5,02,245 ರೂ.ಗಳನ್ನ ಪಡೆದಿದ್ದು, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದಿರುವುದು ದಾಳಿ ವೇಳೆ ಪತ್ತೆಯಾಗಿದೆ. ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಸೋಂಕಿತ ಬ್ಯಾಂಕ್ ಖಾತೆಗೆ ಮರಳಿ ಜಮೆ ಮಾಡುವಂತೆ ಅಧಿಕಾರಿಗಳು ಆಸ್ಪತ್ರೆಗೆ ಸೂಚಿಸಿದ್ದಾರೆ. ಅಲ್ಲದೆ ಸೋಂಕಿತರಿಂದ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
Advertisement
Advertisement
ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಲಭ್ಯವಿರುವ ಬಗ್ಗೆ ಡಿಸ್ ಪ್ಲೇ ಬೊರ್ಡ್ ಖಡ್ಡಾಯವಾಗಿ ಅಳವಡಿಸುವಂತೆ ಇದೇ ವೇಳೆ ಸೂಚನೆ ನೀಡಿದ್ದಾರೆ. ತಂಡ ಇನ್ನೂ ನಾಲ್ಕು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಮಾರತ್ ಹಳ್ಳಿಯ ಸರ್ಕಾರಿ ಆಸ್ಪತ್ರೆ, ಯಶೋಮತಿ, ವೈಟ್ಫೀಲ್ಡ್ ನ ಕೋಲಂಬಿಯಾ ಏಷ್ಯಾ, ವೈದೇಹಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ನಾಲ್ಕು ಆಸ್ಪತ್ರೆಗಳ ಬಿಲ್ ಪರಿಶೀಲನೆ ನಡೆಸಿದ್ದು ಹೆಚ್ಚು ಹಣ ಪಡೆಯದಂತೆ ವಾರ್ನ್ ಮಾಡಿದ್ದಾರೆ.