ಯಾದಗಿರಿ: ಸೈಟ್ ಹಂಚಿಕೆ ವಿಚಾರಕ್ಕೆ ಅಣ್ಣನೇ ಒಡಹುಟ್ಟಿದ ತಮ್ಮನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಜಿಲ್ಲೆಯ ಸುರಪುರ ತಾಲೂಕಿನ ದಿವಾಳಗುಡ್ಡದಲ್ಲಿ ಘಟನೆ ನಡೆದಿದೆ. ಶಿವರಾಜ್ (21) ಕೊಲೆಯಾದ ಯುವಕ. ಅಣ್ಣ ರಾಘವೇಂದ್ರ ತನ್ನ ತಮ್ಮನನ್ನೇ ಕೊಂದಿದ್ದಾನೆ. ಕೊಲೆ ಮಾಡಲು ತಾತಪ್ಪ ಮತ್ತು ನರಸಿಂಹರಾಜು ಇಬ್ಬರೂ ಕುಮ್ಮಕ್ಕು ನೀಡಿದ ಆರೋಪ ಕೇಳಿಬಂದಿದೆ.
Advertisement
Advertisement
ಸೈಟ್ ಹಂಚಿಕೆ ವಿಚಾರದಲ್ಲಿ ಶುರುವಾದ ಮೂವರು ಸಹೋದರರ ಜಗಳ ಮಕ್ಕಳ ಕೊಲೆಯಲ್ಲಿ ಅಂತ್ಯವಾಗಿದೆ. ಗ್ರಾಮದ ನಿಂಗಪ್ಪ, ಮರೇಪ್ಪ, ತಾತಪ್ಪ ಮೂವರು ಅಣ್ಣ ತಮ್ಮಂದಿರಾಗಿದ್ದು, ತಾತಪ್ಪನ ಹೆಸರಿನಲ್ಲಿ ಸೈಟ್ ಇತ್ತು. ಆದರೆ ತಾತಪ್ಪ ತನ್ನ ಸಹೋದರರಾದ ನಿಂಗಪ್ಪ, ಮರೇಪ್ಪಗೆ ಪಾಲು ನೀಡಿದೆ, ಇಡೀ ಸೈಟ್ ನಲ್ಲಿ ಮನೆಕಟ್ಟಲು ಮುಂದಾಗಿದ್ದ. ಇದರಿಂದಾಗಿ ಕೋಪಗೊಂಡ ನಿಂಗಪ್ಪನ ಮಗ ಶಿವರಾಜ್, ತನ್ನ ದೊಡ್ಡಪ್ಪ ತಾತಪ್ಪನ ಹತ್ತಿರ ಜಗಳವಾಡಲು ಮುಂದಾಗಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾತಪ್ಪನ ಮಗ ರಾಘವೇಂದ್ರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
Advertisement
Advertisement
ಕೋಪದಲ್ಲಿದ್ದ ರಾಘವೇಂದ್ರಗೆ ತಾತಪ್ಪ ಮತ್ತು ನರಸಿಂಹರಾಜು ಕೊಲೆ ಮಾಡುವಂತೆ ಕುಮ್ಮಕ್ಕು ನೀಡಿರುವ ಆರೋಪ ಸಹ ಕೇಳಿಬಂದಿದೆ. ಆರೋಪಿಗಳು ಸದ್ಯ ತಲೆ ಮರೆಸಿಕೊಂಡಿದ್ದು, ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸುರಪುರ ಡಿವೈಎಸ್‍ಪಿ ವೆಂಕಟೇಶ ಹುಗಿಬಂಡಿ ಮತ್ತು ಸಿಪಿಐ ಎಸ್.ಎಂ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ. ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.