– 4 ಗಂಟೆಯಲ್ಲಿ 8 ವಿಷಯಗಳ ಬೋಧನೆ
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಸದ್ಯಕ್ಕೆ ಸೆಪ್ಟಂಬರ್ವರೆಗೂ ಶಾಲೆಗಳ ಪ್ರಾರಂಭ ಇಲ್ಲ. ಹೀಗಾಗಿ ಇಂದಿನಿಂದ ಮಕ್ಕಳಿಗೆ ಇ-ಕ್ಲಾಸ್ ಆರಂಭವಾಗಲಿದೆ.
ಚಂದನ ವಾಹಿನಿಯಲ್ಲಿ ಸೇತುಬಂದ ಕಾರ್ಯಕ್ರಮಗಳು ಆರಂಭವಾಗುತ್ತಿವೆ. ಇಂದಿನಿಂದ 8-10ನೇ ತರಗತಿವರೆಗಿನ ಪಾಠಗಳು ಪ್ರಸಾರವಾಗುತ್ತೆ. ಮಕ್ಕಳ ಹಿತ ದೃಷ್ಠಿಯಿಂದ ಇಂದಿನಿಂದ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತಿದೆ. ಜುಲೈ 20 ರಿಂದ 31ರ ವರೆಗೆ ಬ್ರಿಡ್ಜ್ ಕೋರ್ಸ್ ನಡೆಯಲಿದ್ದು, ಈಗಾಗಲೇ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
Advertisement
Advertisement
ಶಾಲೆಗಳ ಪ್ರಾರಂಭ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಸೆಪ್ಟೆಂಬರ್ನಲ್ಲಿ ಶಾಲೆ ಪ್ರಾರಂಭ ಆಗುತ್ತೆ ಎಂಬ ನಿರ್ಣಯವನ್ನು ಸರ್ಕಾರ ವ್ಯಕ್ತಪಡಿಸಿಲ್ಲ. ಕೊರೊನಾ ಸಂದರ್ಭದಲ್ಲಿನ ಶಿಕ್ಷಣ ಕ್ಷೇತ್ರದ ಆದ್ಯತೆಗಳು ಬೇರೆ ಇದೆ. ಅವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ತನ್ನನ್ನು ತೊಡಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
Advertisement
ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದ ಮುಕ್ತ ವಾತಾವರಣದ ಸೃಷ್ಟಿಯಾದ ಮೇಲೆ ಮಾತ್ರ ಶಾಲೆಗಳಿಗೆ ಹಾಜರಾಗುತ್ತಾರೆ. ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಬಗ್ಗೆ ನಾವು ಯಾವುದೇ ಯೋಚನೆ, ನಿರ್ಣಯ ಕೈಗೊಂಡಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನವಶ್ಯಕ ಆತಂಕ ಬೇಡ ಎಂದು ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಈ ವರ್ಷ ಇ ಕ್ಲಾಸ್ ಹಾಗೂ ಆನ್ಲೈನ್ ಕ್ಲಾಸ್ಗಳು ಮಾತ್ರನ ಅಂತ ಬಹುತೇಕ ಪೋಷಕರ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಶಾಲೆಗಳ ಓಪನ್ ಆಗುವ ಸಾಧ್ಯತೆ ಕಡಿಮೆ ಇದೆ.
ಇತ್ತೀಚೆಗೆ ಸಚಿವ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಕೂಡ ಈ ವಿಚಾರ ಪ್ರಸ್ತಾಪ ಮಾಡಿದ್ದು, ಮಕ್ಕಳು, ವೃದ್ಧರನ್ನ ಹೊರಗೆ ಕಳಿಸದೇ ರಕ್ಷಣೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದರು. ಜೊತೆಗೆ ಮಕ್ಕಳ ತಜ್ಞರಿಂದಲೂ ಶಾಲೆ ಓಪನ್ ಮಾಡದೇ ಇರುವುದೇ ಉತ್ತಮ ಎಂಬ ಸಲಹೆ ಬಂದಿತ್ತು.