-ಸಾರಾ, ರಕುಲ್ಗೆ ಸಮನ್ಸ್ ನೀಡಿಲ್ಲ
ಮುಂಬೈ: ಧೋನಿ ಸಿನ್ಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಇಂದು ಇಬ್ಬರನ್ನ ಬಂಧಿಸಿದೆ. ಇಬ್ಬರು ಸೇರಿದಂತೆ ಇದುವರೆಗೂ 18 ಜನರ ಬಂಧನವಾಗಿದೆ.
ನಟಿ ರಿಯಾ ಚಕ್ರವರ್ತಿ ಸೋದರ ಶೌವಿಕ್ ಬಾಲ್ಯದ ಗೆಳೆಯ ಸೂರ್ಯದೀಪ್ ಮಲ್ಹೋತ್ರನನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಗೋವಾದ ಕ್ರಿಸ್ಟ್ ಕೊಸ್ಟಾನ್ನನ್ನು ಬಂಧಿಸಿದ್ದು, ವಿಚಾರಣೆಗಾಗಿ ಮುಂಬೈಗೆ ಕರೆತರುವ ಸಾಧ್ಯತೆಗಳಿವೆ. ಜೂನ್ 14ರಂದು ನಿಧನಹೊಂದಿದ ಸುಶಾಂತ್ ಸಿಂಗ್ ಪ್ರಕರಣ ಡ್ರಗ್ಸ್ ಆಯಾಮವನ್ನ ಪಡೆದುಕೊಂಡಿದೆ.
Advertisement
Advertisement
ಇತ್ತ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ಗೆ ಎನ್ಸಿಬಿ ಸಮನ್ಸ್ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದ್ರೆ ನಟಿಯರಿಗೆ ಯಾವುದೇ ಸಮನ್ಸ್ ನೀಡಿಲ್ಲ. ಪ್ರಕರಣದಲ್ಲಿ ಇಬ್ಬರ ಭಾಗಿಯಾಗಿದ್ದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎನ್ಸಿಬಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
Advertisement
Advertisement
ಶುಕ್ರವಾರವಷ್ಟೇ ರಿಯಾ ಚಕ್ರವರ್ತಿ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಸೋಮವಾರ ನ್ಯಾಯಾಲಯ ವಿವರವಾದ ಆದೇಶ ಪ್ರತಿಯನ್ನು ನೀಡಿದೆ. ಈ ವೇಳೆ ಆರೋಪಿಯು ಈ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥಳಲ್ಲ ಎಂಬುದನ್ನು ನಂಬಲು ಸಮಂಜಸವಾದ ಆಧಾರಗಳಿರುವುದನ್ನು ದಾಖಲಿಸಬೇಕಿದೆ. ಆದರೆ ನ್ಯಾಯಾಲಯವು ಈ ಪ್ರಕರಣವನ್ನು ಖುಲಾಸೆಗೊಳಿಸುವ ತೀರ್ಪನ್ನು ಉಚ್ಚರಿಸುತ್ತಿದೆ ಅಥವಾ ತಪ್ಪಿತಸ್ಥಳಲ್ಲ ಎಂದು ದಾಖಲಿಸುವಂತೆ ಪರಿಗಣಿಸುವ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ಸಹ ನೆನಪಿನಲ್ಲಿಡಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಜಾಮೀನು ಅರ್ಜಿಯಲ್ಲಿ ರಿಯಾ, ತನಿಖೆ ವೇಳೆ ಒಪ್ಪಿಕೊಂಡಿದ್ದನ್ನು ತಳ್ಳಿಹಾಕಿದ್ದು, ತನಿಖೆ ವೇಳೆ ನನ್ನನ್ನು ಹೆದರಿಸಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ತಿಳಿಸಿದ್ದಾರೆ. ಜೊತೆಗೆ ನಾನು ಏನೂ ತಪ್ಪು ಮಾಡಿಲ್ಲ. ಸುಮ್ಮನೆ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ. ಈ ವೇಳೆ ಹೊರಗಿನಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಈ ಸಂದರ್ಭದಲ್ಲಿ ತನಿಖೆ ಮಾಡುತ್ತಿರುವುದು ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜಾಮೀನಿಗೆ ಅರ್ಜಿ ಹಾಕಿದ್ದರು.