ಹೌದು. ಖ್ಯಾತ ವರ್ಣಚಿತ್ರಕಾರ ಡಚ್ನ ವಿನ್ಸೆಂಟ್ ವಾನ್ ಗೋ ಅವರ “ಸ್ಟಾರಿ ನೈಟ್ಸ್” ಎಂಬ ಪ್ರಸಿದ್ಧ ಚಿತ್ರಕಲೆಯನ್ನು ಸುಶಾಂತ್ ಸಿಂಗ್ ಅವರು ಟ್ವಿಟ್ಟರ್ ಕವರ್ ಪೇಜ್ನಲ್ಲಿ ಹಾಕಿಕೊಂಡಿದ್ದರು. ವಾನ್ ಗೋ 1889ರಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಗ “ಸ್ಟಾರಿ ನೈಟ್” ಅನ್ನು ಚಿತ್ರಿಸಿದ್ದರು. ನಂತರದ ಒಂದು ವರ್ಷ ಅಂದ್ರೆ 1890ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರ ಭಾರೀ ಚರ್ಚೆಯಾಗುತ್ತಿದೆ.
Little analysis of #SushantSinghRajput Twitter profile.
His cover image is a famous painting "Starry Nights" by Vincent Van Gogh. Gogh painted Starry Night in 1889 during his stay at the asylum when he was fighting #depression.
Gogh allegedly committed suicide in 1890. ???? pic.twitter.com/1PKrE6rQek— Kumar Manish (@kumarmanish9) June 14, 2020
Advertisement
ಡಚ್ ವರ್ಣಚಿತ್ರಕಾರ ವಿನ್ಸೆಂಟ್ ವಾನ್ ಗೋ ಅವರು ಉತ್ತರ ಫ್ರಾನ್ಸ್ನ ಆವೆರ್ಸ್-ಸುರ್-ಓಯಿಸ್ ಹಳ್ಳಿಯ ಮನೆಯಲ್ಲಿ ವಾಸವಾಗಿದ್ದರು. ಆದರೆ 1890ರ ಜುಲೈ 29ರಂದು ಬೆಳಗ್ಗೆ ಮನೆಯ ಕೋಣೆಯಲ್ಲಿ ಹೊಟ್ಟೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
Advertisement
Advertisement
ಲಾಕ್ಡೌನ್ ಹಿನ್ನೆಲೆ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸುಶಾಂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಒಬ್ಬರೇ ವಾಸವಾಗಿದ್ದರು. ಇಂದು ಮನೆಗೆ ಕೆಲಸದವರು ಬಂದಾಗ ಸಾವಿನ ವಿಷಯ ಬೆಳಕಿಗೆ ಬಂದಿದೆ. ಲಾಕ್ಡೌನ್ ಹಿನ್ನೆಲೆ ಒಂಟಿಯಾಗಿದ್ದ ಸುಶಾಂತ್ ಖಿನ್ನತೆಗೆ ಜಾರಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸರು ಸುಶಾಂತ್ ಪಾರ್ಥಿವ ಶರೀರವವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
Advertisement
ಪೊಲೀಸರು ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಹಾಗೆ ನೆರೆಹೊರೆಯವರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.