ಮುಂಬೈ: ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಸುಶಾಂತ್ ಮೃತ ದೇಹ ಪತ್ತೆಯಾದ ಕೋಣೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಇತ್ತ ಜೂನ್ 10ರಂದು ಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಲಾನಿಯಾ ಸಹ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಹಾಗಾಗಿ ಎರಡೂ ಪ್ರಕರಣಗಳಿಗೆ ಲಿಂಕ್ ಇದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಾನುವಾರ ಬೆಳಗ್ಗೆ ಸುಮಾರು 9.30ಕ್ಕೆ ಜ್ಯೂಸ್ ಕುಡಿದ ರೂಮ್ ಸೇರಿಕೊಂಡಿದ್ದ ಸುಶಾಂತ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
Advertisement
ಸುಶಾಂತ್ ಹೆಸರು ಕೆಲವು ನಟಿಯರ ಜೊತೆ ಥಳಕು ಹಾಕಿಕೊಂಡಿತ್ತು. ಈ ನಟಿಯರ ಪೈಕಿ ರಿಯಾ ಚಕ್ರವರ್ತಿ ಸಹ ಒಬ್ಬರು. ಸುಶಾಂತ್ ಆತ್ಮಹತ್ಯೆಯ ಹಿಂದಿನ ದಿನ ಗೆಳೆತಿ ರಿಯಾಗೆ ಕಾಲ್ ಮಾಡಿದ್ದಾರೆ. ಆದ್ರೆ ರಿಯಾ ಕರೆಯನ್ನು ಸ್ವೀಕರಿಸಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಏನಾದ್ರೂ ಜಗಳ ನಡೆದಿತ್ತಾ? ಇಬ್ಬರ ನಡುವಿನ ಸಂಬಂಧ ಹೇಗಿತ್ತು? ಎಂಬುದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Advertisement
Advertisement
ಸುಶಾಂತ್ ಮೃತದೇಹ ಇರಿಸಲಾಗಿರುವ ಆಸ್ಪತ್ರೆಗೆ ಬಂದ ರಿಯಾ ಗೆಳೆಯನ ಅಂತಿಮ ದರ್ಶನ ಪಡೆದಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ರಿಯಾ ಭಾವುಕರಾದಂತೆ ಕಾಣಿಸುತ್ತಿತ್ತು. ಆದ್ರೆ ರಿಯಾ ಯಾರ ಜೊತೆಯೇ ಮಾತನಾಡದೇ ಮನೆಯತ್ತ ತೆರಳಿದ್ದಾರೆ.
ಅಂಕಿತಾ ಲೋಕಂಡೆ, ಕೃತಿ ಸನನ್ ಬಳಿಕ ಸುಶಾಂತ್ ಹೆಚ್ಚಾಗಿ ರಿಯಾ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಖಾಸಗಿ ಕಾರ್ಯಕ್ರಮಗಳು ಸೇರಿದಂತೆ ಹೋಟೆಲ್ ಸಾರ್ವಜನಿಕ ಸ್ಥಳಗಳಲ್ಲಿ ಸುಶಾಂತ್ ಮತ್ತು ರಿಯಾ ಜೊತೆ ಸುತ್ತಾಡುತ್ತಿದ್ದರು. ಇಬ್ಬರ ಮಧ್ಯೆ ಪ್ರೀತಿ ಅನ್ನೋ ಸುದ್ದಿಗಳು ರಂಗೀನ್ ದುನಿಯಾದಲ್ಲಿಯೂ ಹರಿದಾಡಿತ್ತು. ಈ ಬಗ್ಗೆ ಇಬ್ಬರು ಎಲ್ಲಿಯೂ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿಲ್ಲ.
https://www.instagram.com/p/CBc2L-ago6y/
ಸಿನಿಮಾ ಉದ್ಯಮಕ್ಕೆ ಇತ್ತೀಚಿಗೆ ಕಾಲಿಟ್ಟಿರುವ ರಿಯಾ, ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದರಂತೆ. ಹಾಗಾಗಿ ಮದುವೆಯಾಗಲು ಹಿಂದೇಟು ಹಾಕುತ್ತಿದ್ದರು ಎಂದು ವರದಿಗಳು ಪ್ರಕಟವಾಗಿವೆ. ಸೋನಾಲಿ ಕೇಬಲ್, ದೊಬಾರಾ, ಹಾಲ್ ಗರ್ಲ್‍ಫ್ರೆಂಡ್, ಬ್ಯಾಂಕ್ ಚೋರ್ ಸೇರಿದಂತೆ ಹಿಂದಿ ಮತ್ತು ತೆಲಗು ಸಿನಿಮಾಗಳಲ್ಲಿ ರಿಯಾ ನಟಿಸಿದ್ದಾರೆ. ಸದ್ಯ ರಿಯಾ ದೊಡ್ಡ ಬ್ರೇಕ್‍ಗಾಗಿ ಕಾಯುತ್ತಿದ್ದಾರೆ.
https://www.instagram.com/p/CBctq6mALrA/