– ಮಹಿ ಹೆಸರಿನಲ್ಲಿವೆ 4 ಪ್ರಮುಖ ಐಪಿಎಲ್ ರೆಕಾರ್ಡ್ಸ್
ನವದೆಹಲಿ: ಈ ಬಾರಿಯ ಐಪಿಎಲ್‍ನಿಂದ ಹೊರಬಂದಿರುವ ಸುರೇಶ್ ರೈನಾ ಅವರ ಐಪಿಎಲ್ ದಾಖಲೆಯೊಂದನ್ನು ಬ್ರೇಕ್ ಮಾಡುವ ಸನಿಹದಲ್ಲಿ ಎಂಎಸ್ ಧೋನಿಯವರು ಇದ್ದಾರೆ.
ಆರು ತಿಂಗಳು ತಡವಾಗಿ ಇಂದು ಐಪಿಎಲ್ ಆರಂಭವಾಗಲಿದೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ಐಪಿಎಲ್-2020ಯ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಲಿವೆ.
Advertisement
Advertisement
ವೈಯಕ್ತಿಕ ಕಾರಣ ಕೊಟ್ಟು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಐಪಿಎಲ್‍ನಿಂದ ಹೊರಬಂದಿದ್ದಾರೆ. ಆದರೆ ಐಪಿಎಲ್‍ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಸುರೇಶ್ ರೈನಾ ಮಾಡಿದ್ದಾರೆ. ರೈನಾ ಒಟ್ಟು 193 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ರೈನಾ ನಂತರ 190 ಪಂದ್ಯಗಳನ್ನಾಡಿರುವ ಧೋನಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಇನ್ನೂ ಕೆವಲ ನಾಲ್ಕು ಪಂದ್ಯಗಳನ್ನಾಡಿದರೆ ಧೋನಿ ರೈನಾರ ದಾಖಲೆಯನ್ನು ಮುರಿಯಲಿದ್ದಾರೆ.
Advertisement
Advertisement
ಐಪಿಎಲ್‍ನ 12 ಆವೃತ್ತಿಯಲ್ಲಿ ರೈನಾ ಒಟ್ಟು 193 ಪಂದ್ಯಗಳನ್ನಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ 190 ಪಂದ್ಯಗಳನ್ನಾಡಿರುವ ಧೋನಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ (188), ನಾಲ್ಕನೇ ಸ್ಥಾನದಲ್ಲಿ ದಿನೇಶ್ ಕಾರ್ತಿಕ್ (182), ಒಟ್ಟು 177 ಐಪಿಎಲ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಮತ್ತು ರಾಬಿನ್ ಉತ್ತಪ್ಪ ಐದನೇ ಸ್ಥಾನದಲ್ಲಿ ಇದ್ದಾರೆ. ಇದನ್ನು ಓದಿ: 2020ರ ಐಪಿಎಲ್ ಆವೃತ್ತಿಗೆ ಕೌಂಟ್‍ಡೌನ್ ಶುರು
ಐಪಿಎಲ್‍ನಲ್ಲಿ ಎಂಎಸ್ ಧೋನಿ ಪ್ರಮುಖ ನಾಲ್ಕು ದಾಖಲೆಯನ್ನು ಮಾಡಿದ್ದಾರೆ. ಮೊದಲನೇಯದಾಗಿ ನಾಯಕನಾಗಿ 104 ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಮೊದಲ ನಾಯಕ ಎಂಬ ದಾಖಲೆ ಮಾಡಿದ್ದಾರೆ. ನಾಯಕನಾಗಿ ಧೋನಿಯ ಸಕ್ಸಸ್ ರೇಟ್ 60.11 ಇದೆ. ಎರಡನೇಯದಾಗಿ ಧೋನಿ ಐಪಿಎಲ್‍ನಲ್ಲಿ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಆಗಿದ್ದು, 132 ಬಾರಿ ಬ್ಯಾಟ್ಸ್ ಮ್ಯಾನ್‍ಗಳನ್ನು ಔಟ್ ಮಾಡಿದ್ದಾರೆ. ಇದರಲ್ಲಿ ದಾಖಲೆಯ 38 ಸ್ಟಂಪಿಂಗ್‍ಗಳು ಸಹ ಸೇರಿವೆ.
ಮೂರನೇಯದಾಗಿ ನಾಯಕನಾಗಿ ಅತೀ ಹೆಚ್ಚು ಬಾರೀ ತಂಡವನ್ನು ಮುನ್ನಡೆಸಿದ ದಾಖಲೆಯೂ ಕೂಡ ಧೋನಿಯವರ ಹೆಸರಿನಲ್ಲಿದೆ. ಚೆನ್ನೈ ಮತ್ತು ಪುಣೆ ತಂಡದ ನಾಯಕನಾಗಿ ಬರೋಬ್ಬರಿ 174 ಪಂದ್ಯಗಳನ್ನು ಅವರು ಮುನ್ನಡೆಸಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಭಾರತೀಯ ಆಟಗಾರ ಪೈಕಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ಧೋನಿ ಇಲ್ಲಿಯವರೆಗೂ 209 ಸಿಕ್ಸರ್ ಸಿಡಿಸಿದ್ದಾರೆ. ಈ ಲಿಸ್ಟ್‍ನಲ್ಲಿ 326 ಸಿಕ್ಸರ್ ಸಿಡಿಸಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿ ಇದ್ದಾರೆ. ಇದನ್ನು ಓದಿ: ಐಪಿಎಲ್ ನಂ.1 ದಾಖಲೆಯ ಸನಿಹದಲ್ಲಿ ರವೀಂದ್ರ ಜಡೇಜಾ
ಇಂದು ನಡೆಯುವ ಪಂದ್ಯದಲ್ಲಿ ಧೋನಿಯವರನ್ನು ಮೈದಾನದಲ್ಲಿ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 2019ರ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದ ನಂತರ ಧೋನಿ ಕ್ರಿಕೆಟ್‍ನಿಂದ ಕೊಂಚ ದೂರವಿದ್ದರು. ಈ ಮಧ್ಯದಲ್ಲಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಕೂಡ ಹೇಳಿದ್ದರು. ಧೋನಿಯವರ ಇದೇ ಲಾಸ್ಟ್ ಐಪಿಎಲ್ ಆವೃತ್ತಿ ಆಡುತ್ತಾರೆ ಎಂದು ಹೇಳಲಾಗುತ್ತಿದೆ.