ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಎಲ್ಲರಿಗೂ ತೊಂದರೆ ಕೊಟ್ಟು, ಜಿಲ್ಲಾ ವ್ಯವಸ್ಥೆಯನ್ನೇ ಅಲ್ಲೋಲ- ಕಲ್ಲೋಲ ಮಾಡುತ್ತಿದ್ದಾರೆ. ಅವರಿಗೆ ಮಂಡ್ಯ ಸಂಸ್ಕೃತಿ ಗೊತ್ತಿಲ್ಲ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತೊಮ್ಮೆ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಮಂಡ್ಯ ತಾಲೂಕಿನ ಪೀ ಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ಗಣಿಗಾರಿಕೆ ನಡೆದುಕೊಂಡು ಬಂದಿದೆ. ಇದೀಗ ಸಕ್ರಮ – ಅಕ್ರಮ ಎಲ್ಲಾ ಗಣಿಗಾರಿಕೆಗಳು ನಿಂತು ಹೋಗಿವೆ. ಇದರಿಂದ ಕಾಮಗಾರಿಗಳಿಗೆ ಮೆಟಿರಿಯಲ್ಗಳು ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿ ಕೆಲಸಗಳು ನಿಂತು ಹೋಗಿವೆ. ಈ ಮೂಲಕ ಸುಮಲತಾ ಅಂಬರೀಶ್ ಎಲ್ಲರಿಗೂ ತೊಂದರೆ ಕೊಟ್ಟು ಜಿಲ್ಲೆಯ ವ್ಯವಸ್ಥೆಯನ್ನು ಅಲ್ಲೋಲ-ಕಲ್ಲೋಲ ಮಾಡಿದ್ದಾರೆ.
Advertisement
Advertisement
ಸಂಸದ ಯೋಚನೆ ತುಘಲಕ್ ಸಂಸ್ಕೃತಿ ರೀತಿಯಲ್ಲಿ ಇದೆ. ನಾವು ಮನುಷ್ಯರ ಜೊತೆ ಬದುಕುತ್ತಿದ್ದೇವೆ, ವಿಶ್ವಾಸದಿಂದ ಇರಬೇಕು. ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಬೇಕು, ಕಾನೂನು ಬದ್ಧವಾಗಿ ರಾಜಧನ ನಿಗದಿಮಾಡಿ ಕಾಮಗಾರಿಗಳಿಗೆ ಮೆಟಿರೀಯಲ್ ಸಿಗುವ ರೀತಿ ಮಾಡಬೇಕು. ಮಂತ್ರಿ ಆಗಿರುವ ನಾರಾಯಣಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ, ಅವರು ಕೇವಲ ಕೆಆರ್ಪೇಟೆ ಕ್ಷೇತ್ರವಲ್ಲದೇ ಜಿಲ್ಲೆಯ ಅಭಿವೃದ್ಧಿ ಕಡೆಯೂ ಸಹ ಗಮನವರಿಸಬೇಕು ಎಂದು ಮನವಿ ಮಾಡಿದರು.