LatestMain PostNational

ಸೀರೆ ಎತ್ತಿಕಟ್ಟಿ ಕಬಡ್ಡಿ ಅಖಾಡಕ್ಕಿಳಿದ ರೋಜಾ

ಹೈದರಾಬಾದ್: ನಟಿ, ರಾಜಕಾರಣಿ ರೋಜಾ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಎರಡು ನಗರಪಾಲಿಕೆ ಚುನಾವಣೆ ಪ್ರಚಾರದ ವೇಳೆ ಯುವಕರೊಂದಿಗೆ ಕಬಡ್ಡಿ ಆಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿ ಅಧ್ಯಕ್ಷೆ ಆಗಿರುವ ರೋಜಾ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳಿಯ ನಾಯಕರು ಮತ್ತು ಪುತ್ತೂರ್ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು.

ಪ್ರಚಾರಕ್ಕೆಂದು ಹೋದವೇಳೆ ಚಿತ್ತೂರ್ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಟೂರ್ನಮೆಂಟ್ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಅಖಾಡಕ್ಕಿಳಿದಿದ್ದಾರೆ.

ಕಬಡ್ಡಿ..ಕಬಡ್ಡಿ ಎನ್ನುತ್ತಾ ಕೆಲಕಾಲ ಆಟವಾಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕವಾಗಿ ಸುದ್ದಿಯಾಗುವ ನಟಿ ಮಣಿ ಇದೀಗ ಕಬಡ್ಡಿ ಆಟವನ್ನು ಆಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

Leave a Reply

Your email address will not be published.

Back to top button