Bengaluru CityCinemaDistrictsKarnatakaLatestMain Post

ಸಿಸಿಬಿ ವಿಚಾರಣೆಗೆ ಹಾಜರಾದ ಗುಳಿ ಕೆನ್ನೆ ದಂಪತಿ

ಬೆಂಗಳೂರು: ಚಂದನವನದ ಗುಳಿ ಕೆನ್ನೆ ದಂಪತಿ ದಿಗಂತ್ ಮಂಚಾಲೆ ಮತ್ತು ಐಂದ್ರಿತಾ ರೇ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗಿರುವ ಇಬ್ಬರನ್ನ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ದಿಗಂತ್‌, ಐಂದ್ರಿತಾಗೆ ಸಿಸಿಬಿ ನೋಟಿಸ್‌

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಫೋನ್ ಕಾಲ್ ಮೂಲಕ ಮಂಗಳವಾರ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ ವೇಳೆ ದಿಗಂತ್ ಮತ್ತು ಐಂದ್ರಿತಾ ಕೇರಳದಲ್ಲಿದ್ರೂ ಎಂದು ಹೇಳಲಾಗಿತ್ತು. ಇಂದು ಬೆಳಗ್ಗೆ ದಂಪತಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

ತಡರಾತ್ರಿ ವಕೀಲರನ್ನು ಸಂಪರ್ಕಿಸಿರುವ ಮನಸಾರೆ ಜೋಡಿ, ವಿಚಾರಣೆಯನ್ನ ಹೇಗೆ ಎದುರಿಸಬೇಕು? ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೇಳುವ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೇ ಕಾನೂನಿನಲ್ಲಿರುವ ಅವಕಾಶಗಳು ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ

ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯ ಬಂಧನವಾಗಿದೆ. ಸಂಜನಾ ಮತ್ತು ರಾಗಿಣಿ ಪೊಲೀಸ್ ವಿಚಾರಣೆ ವೇಳೆ ನಟಿ ಐಂದ್ರಿತಾ ಹೆಸರು ಹೇಳಿದ ಹಿನ್ನೆಲೆ ಸಿಸಿಬಿ ನೋಟಿಸ್ ನೀಡಿರುವ ಸಾಧ್ಯತೆಗಳಿವೆ. ಕೆಲವು ದಿನಗಳ ಹಿಂದೆ ಕ್ಯಾಸಿನೋ ಮಾಲೀಕ ಶೇಖ್ ಫಾಝಿಲ್ ಜೊತೆ ಐಂದ್ರಿತಾ ಫೋಟೋಗಳು ವೈರಲ್ ಆಗಿದ್ದವು. ಫೋಟೋ ವೈರಲ್ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ದಿಗಂತ್ ಮಡದಿ, ಹಿಂದಿ ಸಿನಿಮಾ ಪ್ರಚಾರಕ್ಕಾಗಿ ಕ್ಯಾಸಿನೋಗೆ ಹೋಗಿದ್ದು ನಿಜ. ಬಾಲಿವುಡ್ ನಟ ಅರ್ಬಾಜ್ ಖಾನ್ ಮೂಲಕ ಎರಡು ಬಾರಿ ಶೇಖ್ ಫಾಝಿಲ್ ನನ್ನು ಎರಡು ಬಾರಿ ಭೇಟಿಯಾಗಿದ್ದೇನೆ. ವೈಯಕ್ತಿಕವಾಗಿ ಶೇಖ್ ಫಾಝಿಲ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

Leave a Reply

Your email address will not be published.

Back to top button