– ಕಿಟಕಿ ಮೂಲಕ ಫ್ಲೈಯಿಂಗ್ ಕಿಸ್
– ಥೇಟ್ ಪೊಲಿಟಿಷಿಯನ್ ಸ್ಟೈಲ್ನಲ್ಲಿ ಎಂಟ್ರಿ
ಬೆಂಗಳೂರು: ನಶೆ ನಂಟು ಆರೋಪದಲ್ಲಿ ಸ್ಯಾಂಡಲ್ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಸದ್ಯ ಸಿಸಿಬಿ ವಶದಲ್ಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು 3 ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹೀಗಾಗಿ ರಾಗಿಣಿಗೆ ಮೆಡಿಕಲ್ ಟೆಸ್ಟ್ ಮಾಡಿಸಲು ಸಿಸಿಬಿ ಕಚೇರಿಯಿಂದ ಕರೆದೊಯ್ಯಲಾಯ್ತು. ಇಷ್ಟೆಲ್ಲಾ ಆದರೂ ಅವರ ಆತ್ಮವಿಶ್ವಾಸ ಎದ್ದು ಕಾಣುತಿತ್ತು.
Advertisement
ಸಿಸಿಬಿ ಕಚೇರಿಯಿಂದ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ ಕರೆದೊಯ್ಯುವ ವೇಳೆ ನಟಿ ರಾಗಿಣಿ ಚಾರ್ಮಿಂಗ್ ಫಿಲಂ ಅಪಿರಿಯೆನ್ಸ್ ತರಹ ಇತ್ತು. ಆದರೆ ರಾಗಿಣಿಯನ್ನು ಮೆಡಿಕಲ್ ಟೆಸ್ಟ್ ಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಥೇಟ್ ಪೊಲಿಟಿಷಿಯನ್ ಸ್ಟೈಲ್ನಲ್ಲಿ ಎಂಟ್ರಿ ಕೊಟ್ಟ ರಾಗಿಣಿ ಟಾಟಾ ಮಾಡುತ್ತಾ, ಕೈ ಮುಗಿಯುತ್ತಾ, ಸ್ಮೈಲ್ ಮಾಡಿದ್ದರು. ಪೊಲೀಸ್ ವಾಹನ ಹತ್ತುವಾಗಲು ಮಾಧ್ಯಮಗಳತ್ತ ಕೈ ಬೀಸಿದ್ರು.
Advertisement
Advertisement
ಮೆಡಿಕಲ್ ಟೆಸ್ಟ್ಗೆ ಹೋಗುವ ವೇಳೆ ಪೊಲೀಸರೊಂದಿಗೆ ಕಿಲಕಿಲ ನಕ್ಕಿದರು. ಏನೂ ಆಗೇ ಇಲ್ವೆನೋ ಎಂಬಂತೆ ಅವರ ವರ್ತನೆ ಇತ್ತು. ಮಾರ್ಗ ಮಧ್ಯೆ ಮಾಸನ ನಗುವಿನಲ್ಲೇ ಪೊಲೀಸರೊಂದಿಗೆ ರಾಗಿಣಿ ನಗುತ್ತಾ ಮಾತಾಡಿದ್ದು, ಕ್ಯಾಮರಾ ಕಂಡು ಕೈ ಬೀಸಿದ್ರು. ಇಷ್ಟಕ್ಕೆ ಮುಗಿಯಲಿಲ್ಲ ರಾಗಿಣಿ ಲೈವ್ಲಿ ಅಪಿರಿಯನ್ಸ್. ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಥಮ್ಸ್ ಅಪ್ ಮಾಡಿದ್ರು. ಈ ಮೂಲಕ ಅರೆಸ್ಟ್ ಆಗಿದ್ರೂ ರಾಗಿಣಿ ಆತ್ಮವಿಶ್ವಾಸ ಮಾತ್ರ ಕಡಿಮೆ ಆಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು .
Advertisement
ಇದಕ್ಕೂ ಮುನ್ನ ಸಿಸಿಬಿ ಕಚೇರಿಯಲ್ಲಿದ್ದಾಗ ನಟಿ ರಾಗಿಣಿ ಕಿಟಕಿಯಲ್ಲಿ ದರ್ಶನ ಕೊಟ್ಟು, ಕ್ಯಾಮೆರಗಳತ್ತ ಫ್ಲೈಯಿಂಗ್ ಕಿಸ್ ಕೊಟ್ಟು ಹಾಯ್ ಮಾಡಿದ್ರು. ಅಲ್ಲದೆ ದೇವರಿದ್ದಾನೆ ಎಂದು ಕೈ ಸನ್ನೆ ಮಾಡಿ ತೋರಿಸಿದ್ರು.
ಒಟ್ಟಿನಲ್ಲಿ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ತುಪ್ಪದ ಬೆಡಗಿ ನಟಿ ರಾಗಿಣಿ 3 ದಿನಗಳ ಕಾಲ ಸಿಸಿಬಿ ವಶದಲ್ಲಿರುತ್ತಾರೆ. ವಿಚಾರಣೆಯಲ್ಲೂ ಇದೇ ರೀತಿಯ ಕಳಕಳಿಯಾಗಿ ಇರುತ್ತಾರಾ, ಸಿಸಿಬಿ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಕಾದು ನೋಡಬೇಕು.