– ಉಪ್ಪಾರಪೇಟೆ ಠಾಣೆ ಪಿಎಸ್ಐಗೆ ಸೋಂಕು
– ಅಧಿಕಾರಿಗೆ ಸೋಂಕು, ಅಗ್ನಿಶಾಮಕ ಕೇಂದ್ರ ಕಚೇರಿ ಸೀಲ್ಡೌನ್
ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರನ್ನು ಕೊರೊನಾ ಬೆಂಬಿಡದೆ ಕಾಡುತ್ತಿದ್ದು, ಪೊಲೀಸರ ಜೊತೆಗೆ ಇದೀಗ ಅಗ್ನಿಶಾಮಕ ಸಿಬ್ಬಂದಿಗೂ ವ್ಯಾಪಿಸುತ್ತಿದೆ. ಇಂದು ಇಬ್ಬರು ಪೊಲೀಸರು ಹಾಗೂ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೋಮಕು ತಗುಲಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯ ಪಿಎಸ್ಐಗೆ ಹಾಗೂ ಹಲಸೂರು ಗೇಟ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ಗೆ ಸೋಂಕು ದೃಢಪಟ್ಟಿದೆ. ಈ ಹಿಂದೆ ಉಪ್ಪಾರಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಪಾಸಿಟಿವ್ ಬಂದ ಹಿನ್ನೆಲೆ ಸೀಲ್ ಡೌನ್ ಮಾಡಲಾಗಿತ್ತು. ಇಂದು ಪಿಎಸ್ಐಗೆ ಪಾಸಿಟಿವ್ ಬಂದಿದ್ದು, ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯನ್ನು ಮತ್ತೆ ಸೀಲ್ ಡೌನ್ ಮಾಡಲಾಗಿದೆ.
Advertisement
Advertisement
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್ಟೇಬಲ್ಗೆ ಸೋಂಕು ದೃಢಪಟ್ಟಿದೆ. ಇತ್ತ ಅಗ್ನಿಶಾಮಕ ದಳದ ಆರ್ಎಫ್ಓ ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಲೇಔಟ್ ನಿವಾಸಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಪೋಸ್ಟಿಂಗ್ ಹಾಕದ ಹಿನ್ನೆಲೆ ಆರ್ಎಫ್ಓ ಮನೆಯಲ್ಲೇ ಇದ್ದರು. ವರ್ಗಾವಣೆ ಬಳಿಕ ಪೋಸ್ಟಿಂಗ್ ನೀಡಿರಲಿಲ್ಲ. ಹೀಗಾಗಿ ಅಧಿಕಾರಿ ಪೋಸ್ಟಿಂಗ್ಗೆ ಕಾಯುತಿದ್ದರು. ಇದೀಗ ಸೋಂಕು ತಗುಲಿದ ಹಿನ್ನೆಲೆ ಮನೆಯಲ್ಲಿದ್ದ ಕುಟುಂಬಸ್ಥರನಹ್ನು ಕ್ವಾರಂಟೈನ್ ಮಾಡಲಾಗಿದೆ.
Advertisement
ಅಗ್ನಿಶಾಮಕ ದಳ ಅಧಿಕಾರಿಯೊಬ್ಬರಿಗೆ ಪಾಸಿಟಿವ್ ಬಂದ ಹಿನ್ನೆಲೆ ಹಲಸೂರು ಕೆರೆ ಬಳಿ ಇರುವ ರಾಜ್ಯ ಅಗ್ನಿಶಾಮಕದಳದ ಕೇಂದ್ರ ಕಚೇರಿಯನ್ನು ಸಹ ಸೀಲ್ ಡೌನ್ ಮಾಡಲಾಗಿದೆ. ಸಿಬ್ಬಂದಿ ಸೀಲ್ಡೌನ್ ಮಾಡಿದ್ದು, ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ.
Advertisement
ಸಿಲಿಕಾನ್ ಸಿಟಿಯಲ್ಲಿ ಈ ವರೆಗೆ ಒಟ್ಟು 145 ಜನ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಇನ್ನೂ 133 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಈ ವರೆಗೆ ಕೊರೊನಾಗೆ 05 ಜನ ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದಾರೆ.