ಬೆಂಗಳೂರು: ಸಿದ್ದರಾಮಯ್ಯ ಮುಂದಿನ ಸಿಎಂ ಅಂತ ಶಾಸಕರುಗಳು ಹೇಳಿದರೆ ನಾನು ಏನು ಮಾಡಲು ಸಾಧ್ಯವಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸಿಎಂ ರೇಸ್ ವಿವಾದದ ಬೆಂಕಿಗೆ ಸಿದ್ದರಾಮಯ್ಯ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಾಸಕರು ಹೇಳಿದರೆ ನಾನೇನು ಮಾಡಲಿ? ಅವರ ಹೇಳಿಕೆಗೂ ನನಗೂ ಸಂಬಂಧ ಇಲ್ಲಾ ಎಂದಿದ್ದಾರೆ. ಶಾಸಕರ ಹೇಳಿಕೆಗೆ ಬ್ರೇಕ್ ಹಾಕಲು ಹಿಂದೇಟು ಹಾಕಿದ ಸಿದ್ದರಾಮಯ್ಯ ತಮ್ಮ ಪರವಾದ ಸಿಎಂ ಆಗಬೇಕು ಎಂಬ ಶಾಸಕರ ಕೂಗಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ.
ಹೈಕಮಾಂಡ್ ಹೇಳಿದ ಮೇಲೆ ಎಲ್ಲಾ ಸರಿಯಾಗುತ್ತೆ ಎಂದುಕೊಂಡಿದ್ದ ಕಾಂಗ್ರೆಸ್ ನಾಯಕರುಗಳ ನಿರೀಕ್ಷೆಯು ಹುಸಿಯಾಗಿದೆ. ಇದನ್ನೂ ಓದಿ : ಸಿದ್ದರಾಮಯ್ಯ ಸಿಎಂ ಕ್ಯಾಂಡಿಡೇಟ್ ಎಂದು ಘೋಷಿಸಿದರೆ 150 ಸೀಟ್ ಫಿಕ್ಸ್: ಅಖಂಡ
ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂಬ ಕಾಂಗ್ರೆಸ್ ಪಾಳಯದ ಕೂಗು ಜೋರಾಗಿದ್ದು ಸಿದ್ದರಾಮಯ್ಯ ಪರೋಕ್ಷ ಬೆಂಬಲದಿಂದಾಗಿ ಸಿಎಂ ವಿವಾದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.