ಬೆಂಗಳೂರು: ಪಾಕಿಸ್ತಾನ ಸೈನಿಕರಿಂದ ಭಾರತೀಯ ಸೈನಿಕರ ಸಾವು ಬಯಸುವ ವ್ಯಕ್ತಿಗಳನ್ನು ಬೆಂಬಲಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸುವ ಮೂಲಕ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದೆ.
Advertisement
ಟ್ವೀಟ್ ನಲ್ಲಿ ಏನಿದೆ?
ಕಾಂಗ್ರೆಸ್ ಕಾರ್ಯಕರ್ತರಾಗಲು ದೇಶ, ಸೈನಿಕರ ವಿರುದ್ಧದ ನಿಲುವು ಹೊಂದಿರುವುದು ಕಡ್ಡಾಯವೇ? ಪಾಕಿಸ್ತಾನ ಸೈನಿಕರು ನಮ್ಮ ಸೈನಿಕರನ್ನು ಕೊಲ್ಲಲಿ ಎಂದ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಕಾನೂನು ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತಿದೆ. ಈ ಮೂಲಕ ಪಾಕ್ ಮೇಲಿನ ತಮ್ಮ ನಿಷ್ಠೆಯನ್ನು ಕಾಂಗ್ರೆಸ್ ನಾಯಕರು ಸಾಬೀತುಪಡಿಸಿದ್ದಾರೆ.
Advertisement
ಪಾಕಿಸ್ಥಾನ ಸೈನಿಕರು ನಮ್ಮ ಸೈನಿಕರನ್ನು ಕೊಲ್ಲಲಿ ಎಂದ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಕಾನೂನು ಕ್ರಮವನ್ನು ಕಾಂಗ್ರೆಸ್ ಖಂಡಿಸುತ್ತಿದೆ.
ಈ ಮೂಲಕ ಪಾಕ್ ಮೇಲಿನ ತಮ್ಮ ನಿಷ್ಠೆಯನ್ನು @INCKarnataka ನಾಯಕರು ಸಾಬೀತುಪಡಿಸಿದ್ದಾರೆ.
ಪಾಕಿಸ್ಥಾನ ಬೆಂಬಲಿಸಿದ ವ್ಯಕ್ತಿಯ ಮೇಲಿನ ಕಾನೂನು ಕ್ರಮ @siddaramaiah ಅವರಿಗೇಕೆ ನೋವು ತರುತ್ತಿದೆ?
— BJP Karnataka (@BJP4Karnataka) July 9, 2021
Advertisement
ಪಾಕಿಸ್ತಾನ ಬೆಂಬಲಿಸಿದ ವ್ಯಕ್ತಿಯ ಮೇಲಿನ ಕಾನೂನು ಕ್ರಮ ಸಿದ್ದರಾಮಯ್ಯನವರಿಗೆ ನೋವು ತರುತ್ತಿದೆ ಯಾಕೆ?
Advertisement
ಮಾನ್ಯ @siddaramaiah ಅವರೇ,
ಪಾಕಿಸ್ಥಾನ ಸೈನಿಕರಿಂದ ಭಾರತೀಯ ಸೈನಿಕರ ಸಾವು ಬಯಸುವ ವ್ಯಕ್ತಿಗಳನ್ನು ಬೆಂಬಲಿಸುತ್ತಿರುವುದು ಎಷ್ಟು ಸರಿ?
ಕಾಂಗ್ರೆಸ್ ಕಾರ್ಯಕರ್ತರಾಗಲು ದೇಶ, ಸೈನಿಕರ ವಿರುದ್ಧದ ನಿಲುವು ಹೊಂದಿರುವುದು ಕಡ್ಡಾಯವೇ?
— BJP Karnataka (@BJP4Karnataka) July 9, 2021
ಸಿದ್ದರಾಮಯ್ಯ ಅವರ ಪಾಕಿಸ್ಥಾನ ಪ್ರೇಮ ಈ ಹಿಂದೆಯೇ ಪ್ರಕಟವಾಗಿತ್ತು. ಪಾಕಿಸ್ತಾನವನ್ನು ಪ್ರೇಮಿಸುವ ಸಮಾಜಘಾತುಕ ಸಂಘಟನೆಗಳ ಕೇಸ್ ಹಿಂಪಡೆದಿದ್ದರು. ಈಗ ಶತ್ರುರಾಷ್ಟ್ರ ಪಾಕಿಸ್ಥಾನದ ಪರವಾಗಿ ಬರೆದ ವ್ಯಕ್ತಿಯ ವಿರುದ್ಧ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ತೋರ್ಪಡಿಸುತ್ತಿರುವ ಕಾಳಜಿ ದೇಶದ ಹಿತಾಸಕ್ತಿಗೆ ಮಾರಕವಾದದ್ದು.
ಸಿದ್ದರಾಮಯ್ಯ ಅವರ ಪಾಕಿಸ್ಥಾನ ಪ್ರೇಮ ಈ ಹಿಂದೆಯೇ ಪ್ರಕಟವಾಗಿತ್ತು. ಪಾಕಿಸ್ಥಾನವನ್ನು ಪ್ರೇಮಿಸುವ ಸಮಾಜಘಾತುಕ ಸಂಘಟನೆಗಳ ಕೇಸ್ ಹಿಂಪಡೆದಿದ್ದರು.
ಈಗ ಶತ್ರುರಾಷ್ಟ್ರ ಪಾಕಿಸ್ಥಾನದ ಪರವಾಗಿ ಬರೆದ ವ್ಯಕ್ತಿಯ ವಿರುದ್ಧ @siddaramaiah ಆದಿಯಾಗಿ @INCKarnataka ಪಕ್ಷದ ನಾಯಕರು ತೋರ್ಪಡಿಸುತ್ತಿರುವ ಕಾಳಜಿ ದೇಶದ ಹಿತಾಸಕ್ತಿಗೆ ಮಾರಕವಾದದ್ದು.
— BJP Karnataka (@BJP4Karnataka) July 9, 2021
ಈ ಹಿಂದೆ ಗೋ ಕಳ್ಳರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಈಗ ಪಾಕಿಸ್ಥಾನ ಪ್ರೇಮಿಯ ಪರ ನಿಂತಿದ್ದಾರೆ. ಕಾಂಗ್ರೆಸ್ ನಾಯಕರ ಒಲವು, ನಿಲುವುಗಳೆಲ್ಲ ದೇಶದ ವಿರುದ್ಧವಾಗಿರುವವರ ಪರವಾಗಿರುತ್ತದೆ. ಸೈನಿಕರ ಸಾವು ಬಯಸುವ ವ್ಯಕ್ತಿಯನ್ನು ಅಮಾಯಕ ಎಂದು ಬಿಂಬಿಸುವ ಏಕೈಕ ಪಕ್ಷವೊಂದಿದ್ದರೆ, ಅದು ಕಾಂಗ್ರೆಸ್ ಮಾತ್ರ
ಈ ಹಿಂದೆ ಗೋ ಕಳ್ಳರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ @siddaramaiah ಅವರು ಈಗ ಪಾಕಿಸ್ಥಾನ ಪ್ರೇಮಿಯ ಪರ ನಿಂತಿದ್ದಾರೆ.
ಕಾಂಗ್ರೆಸ್ ನಾಯಕರ ಒಲವು, ನಿಲುವುಗಳೆಲ್ಲ ದೇಶದ ವಿರುದ್ಧವಾಗಿರುವವರ ಪರವಾಗಿರುತ್ತದೆ.
ಸೈನಿಕರ ಸಾವು ಬಯಸುವ ವ್ಯಕ್ತಿಯನ್ನು ಅಮಾಯಕ ಎಂದು ಬಿಂಬಿಸುವ ಏಕೈಕ ಪಕ್ಷವೊಂದಿದ್ದರೆ, ಅದು ಕಾಂಗ್ರೆಸ್ ಮಾತ್ರ!
— BJP Karnataka (@BJP4Karnataka) July 9, 2021
ಸುನಿಲ್ ಕುಮಾರ್ ಟೀಕೆ:
ದೇಶದ್ರೋಹ ಎಂದರೇನು ಎಂದು ಶ್ರೀ ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ. ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಈಗ ಕಾರ್ಕಳದಲ್ಲಿ ಪೊಲೀಸ್ ಬಂಧಿಸಿದೆ. ಅತ್ತಂತೆ ನಟಿಸುವವರ ಸಮರ್ಥನೆಗೆ ನೀವು ಬೇಗ ಬರುತ್ತಿರಿ.
ದೇಶದ್ರೋಹ ಎಂದರೇನು ಎಂದು ಶ್ರೀ ಸಿದ್ದರಾಮಯ್ಯರಿಂದ ಪ್ರತ್ಯೇಕವಾಗಿ ಕೇಳಬೇಕಿಲ್ಲ. ಅವರು ಸಿಎಂ ಆಗಿದ್ದಾಗ ದೇಶದ್ರೋಹದ ಹೇಳಿಕೆ ಕೊಡುವಂತವರನ್ನು ಜೊತೆಯಲ್ಲಿಟ್ಟುಕೊಂಡೆ ಕೆಲಸ ಮಾಡಿದವರು. ಅದು ನಿಮ್ಮ ಕಾಲ.
ಸೈನಿಕರು, ಸೈನ್ಯದ ಬಗ್ಗೆ ದೇಶದ್ರೋಹದ ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಈಗ ಕಾರ್ಕಳದಲ್ಲಿ ಪೊಲೀಸ್ ಬಂಧಿಸಿದೆ. ಇದು ನಮ್ಮ ಕಾಲ.
1/n
— Sunil Kumar Karkala (@karkalasunil) July 9, 2021
ಕೆಜೆ ಹಳ್ಳಿ ಗಲಭೆ, ಮಂಗಳೂರು ಗಲಭೆ, ಬೆಂಗಳೂರಿನ ಗೌರಿಪಾಳ್ಯದಲ್ಲಿ ವೈದ್ಯರ ಮೇಲೆ ಹಲ್ಲೆ, ಹಿಂದು ಕಾರ್ಯಕರ್ತರ ಕಗ್ಗೊಲೆ, ಕೊಲೆಗಡುಕ ಎಸ್ ಡಿ ಪಿಐ, ಪಿಎಫ್ ಐ ಸಂಘಟನೆಯನ್ನು ನೀವು ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತನಿಗೆ ಕಾರ್ಕಳ ಎಸ್‍ಐ ಮಧು ಹಲ್ಲೆ – ತನಿಖೆಗೆ ಸಿದ್ದರಾಮಯ್ಯ ಒತ್ತಾಯ
ಅತ್ತಂತೆ ನಟಿಸುವವರ ಸಮರ್ಥನೆಗೆ ನೀವು ಬೇಗ ಬರುತ್ತಿರಿ.
ಕೆಜೆ ಹಳ್ಳಿ ಗಲಭೆ – ನಿಮ್ಮ ಸಮರ್ಥನೆ
ಮಂಗಳೂರು ಗಲಭೆ- ನಿಮ್ಮ ಸಮರ್ಥನೆ
ಬೆಂಗಳೂರಿನ ಗೌರಿಪಾಳ್ಯದಲ್ಲಿ ವೈದ್ಯರ ಮೇಲೆ ಹಲ್ಲೆ – ನಿಮ್ಮ ಸಮರ್ಥನೆ
ಹಿಂದು ಕಾರ್ಯಕರ್ತರ ಕಗ್ಗೊಲೆ – ನಿಮ್ಮ ಸಮರ್ಥನೆ
ಕೊಲೆಗಡುಕ ಎಸ್ ಡಿ ಪಿಐ, ಪಿಎಫ್ ಐ ಸಂಘಟನೆ – ನಿಮ್ಮ ಸಮರ್ಥನೆ
2/2
— Sunil Kumar Karkala (@karkalasunil) July 9, 2021