ಗದಗ: ಮಾಜಿ ಮುಖ್ಯಮಂತ್ರಿಗಳಿಬ್ಬರೂ ಶ್ರೀರಾಮನ ಕುರಿತು ವಿವಾದಾತ್ಮಕ ಬಾಲಿಶ ಹಾಗೂ ಕೀಳುಮಟ್ಟದ ಹೇಳಿಕೆ ನಿಲ್ಲಿಸಿ ಅಂತ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲೂ ರಾಮ ಇದ್ದಾನೆ ಎಂಬುದನ್ನು ಮರೆಯದಿರಿ. 30 ವರ್ಷದ ಲೆಕ್ಕ ಈಗ ಕೇಳ್ತಿರಿ. ನೀವು 2 ಬಾರಿ ಸಿ.ಎಂ ಆಗಿದ್ದ ವೇಳೆಯ ಲೆಕ್ಕ ಕೊಡಿ. ಎಷ್ಟು ಕೊಟ್ಟು, ತೆಗೆದುಕೊಂಡು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದೀರಿ ಅದರ ಲೆಕ್ಕ ಕೊಡಿ. ಎಷ್ಟು ಕೊಟ್ಟು, ತೆಗೆದುಕೊಂಡು ಎಮ್ಎಲ್ಸಿ ಮಾಡಿರುವ ಲೆಕ್ಕ ಕೊಡಿ ನೋಡೊಣ ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
Advertisement
Advertisement
ಸಿದ್ದರಾಮಯ್ಯನವರು ರಾಜಕಾರಣದ ಕನ್ನಡಕ ತೆಗೆಯಿರಿ. ನಿಮಗೆ ಎಲ್ಲರೂ ಭ್ರಷ್ಟರೇ ಕಾಣಿಸುತ್ತಾರೆ. ಎಲ್ಲರೂ ದುರುಪಯೋಗ ಮಾಡಿಕೊಳ್ಳುವವರೇ ಕಾಣಿಸ್ತಾರೆ. ನೀವು ಎಲ್ಲಾ ಕಡೆ ದುಡ್ಡು ಹೊಡೆದು, ನುಂಗಿ ನೀರು ಕುಡಿದಿರುವುದರಿಂದ ನಿಮಗೆ ಎಲ್ಲರೂ ಹಾಗೆ ಕಾಣಿಸ್ತಾರೆ. ಮೊದಲು ಇದರಿಂದ ಹೊರಬನ್ನಿ ಎಂದು ವ್ಯಂಗ್ಯವಾಡಿದರು.
Advertisement
ಶ್ರೀರಾಮ ಮಂದಿರ ಬಗ್ಗೆ ಒಂದೊಂದು ರೂಪಾಯಿ ಲೆಕ್ಕವಿದೆ. ಲೆಕ್ಕ ಬೇಕಾದವರು ವಿ.ಎಚ್.ಪಿ ಹೆಡ್ ಆಫೀಸ್ ಗೆ ಹೋದ್ರೆ, ಬ್ಯಾಲೆನ್ಸ್ ಶೀಟ್ ಸಮೇತ ಲೆಕ್ಕ ಕೊಡ್ತಾರೆ ಹೋಗಿ. ಶ್ರೀರಾಮನ ವಿಷಯ, ಆರ್ಎಸ್ಎಸ್, ವಿಶ್ವಹಿಂದೂ ಪರಿಷತ್, ಶ್ರೀರಾಮಸೇನೆ ವಿಷಯದಲ್ಲಿ ಇಬ್ಬರು ಸಿಎಂಗಳು ಅನಾವಶ್ಯಕವಾಗಿ ಮಾತನಾಡಬೇಡಿ. ನಿಮ್ಮ ವಿವಾದಾತ್ಮಕ ಹೇಳಿಕೆ ನೂರು ಕೋಟಿ ರಾಮನ ಭಕ್ತರಿಗೆ ಅವಮಾನ ಮಾಡಿದಂತಾಗುತ್ತೆ ಎಚ್ಚರವಿರಲಿ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
Advertisement
ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿದೆ. ಕೋರ್ಟ್ ತೀರ್ಪು ಎಲ್ರೂ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಪದೇ ಪದೇ ಖ್ಯಾತಿ ಭಾಷಾಭಿಮಾನ, ರಾಜಕೀಯ ಕುರ್ಚಿ ಉಳಿಸಿಕೊಳ್ಳಲು ಹಾಗೂ ಬೆಳೆ ಬೇಯಿಸಿಕೊಳ್ಳಲು ಖ್ಯಾತಿ ತೆಗೆಯುತ್ತಿರುವುದು ಸರಿಯಲ್ಲ. ನಾಡು, ನುಡಿ, ನೆಲ, ಜಲ ವಿಷಯದಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಹೋರಾಡಲು ಎಂದಿಗೂ ಸಿದ್ಧ ಎಂದರು.