-ಸಿದ್ದರಾಮಯ್ಯಗೆ ಗುರು ಕಾಣಿಕೆ ನೀಡಲು ಮುಂದಾದ ಜಮೀರ್
-ಸಿದ್ದರಾಮಯ್ಯ ನಿಜವಾದ ಅಲ್ಪಸಂಖ್ಯಾತರ ನಾಯಕ
ಬೆಂಗಳೂರು: ಸದಾಶಿವನಗರದ ನನ್ನ ಮನೆಯಲ್ಲಿ ವಾಸವಿದ್ದ ಎಚ್ಡಿ ಕುಮಾರಸ್ವಾಮಿ ಮನೆಯ ಮೇಂಟೆನೆನ್ಸ್ ಕಟ್ಟಿಲ್ಲ. ಇನ್ನೇನ್ ಮೇಂಟೇನ್ ಮಾಡ್ತಾರೆ ಅವ್ರು? ಆರೇಳು ಲಕ್ಷ ರೂ ಮೇಂಟೆನೆನ್ಸ್ ಶುಲ್ಕ ಕಟ್ಟಬೇಕಿತ್ತು. ಈಗ ಅದನ್ನು ನಾನು ಕಟ್ಟಬೇಕಿದೆ. ಅವರೊಬ್ಬ ಡೀಲರ್ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್ಡಿಕೆ ಇದ್ದಂತಹ ಸದಾಶಿವನಗರದ ಆ ನಿವಾಸದಲ್ಲಿ ಕಚೇರಿ ಮಾಡುತ್ತಿದ್ದೇನೆ. ಆದರೆ ನನ್ನ ನಿವಾಸವನ್ನು ಸಿದ್ದರಾಮಯ್ಯ ಬೇಕಾದರೆ ಬಳಸಿಕೊಳ್ಳಬಹುದು ಎಂದು ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ
Advertisement
ಅಲ್ಪಸಂಖ್ಯಾತ ನಾಯಕರ ಬಗ್ಗೆ ಎಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ನಿಜವಾಗಿ ಅಲ್ಪಸಂಖ್ಯಾತ ನಾಯಕರರ ಮೇಲೆ ಕಾಳಜಿ ಇರೋದು ಸಿದ್ದರಾಮಯ್ಯ ಮತ್ತು ದೇವೇಗೌಡ ಅವರಿಗೆ ಮಾತ್ರ. ಕುಮಾರಸ್ವಾಮಿಗೆ ಅಲ್ಪಸಂಖ್ಯಾತ ನಾಯಕರ ಮೇಲೆ ಕಾಳಜಿ ಇಲ್ಲ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಮುಸ್ಲಿಂ ನಾಯಕ ಎಂದು ಅವರ ಪಕ್ಷದಿಂದ ಘೋಷಿಸಲಿ. ಆಗ ಜೆಡಿಎಸ್ ಬಗ್ಗೆ ಮುಸ್ಲಿಂ ಸಮಾಜ ಗಂಭೀರವಾಗಿ ಯೋಚಿಸುತ್ತದೆ, ನಾನೂ ಕೂಡ ಯೋಚನೆ ಮಾಡುತ್ತೇನೆ ಎಂದು ಸವಾಲು ಹಾಕಿದರು.
Advertisement
Advertisement
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಮ್ಮೆಯೂ ಹಜ್ ಉದ್ಘಾಟನೆಗೆ ಬರಲಿಲ್ಲ. ಯಡಿಯೂರಪ್ಪ, ಡಿವಿಎಸ್, ಶೆಟ್ಟರ್, ಸಿದ್ದರಾಮಯ್ಯ ಹಜ್ ಯಾತ್ರೆಯ ಉದ್ಘಾಟನೆಗೆ ಬಂದಿದ್ರು. ಇದರಲ್ಲೇ ಗೊತ್ತಾಗುತ್ತೆ ಎಚ್ಡಿಕೆ ಅಲ್ಪಸಂಖ್ಯಾತರ ಮೇಲೆ ಎಷ್ಟು ಪ್ರೀತಿ ಇದೆ ಎಂದು. ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡ್ತಿದ್ರು. ಆದ್ರೆ ಎಚ್ಡಿಕೆ ಸಿಎಂ ಆದ ಬಳಿಕ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡಿ ಅಂತ ಅಧಿಕಾರಿಗಳಿಗೆ ಸೂಚಿಸಿದರು. ಮುಸ್ಲಿಮರ ಮೇಲೆ ಪ್ರೀತಿ ಇದ್ದಿದ್ರೆ ಹೀಗೆ ಮಾಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಟ್ವೀಟ್ ವಾರ್
ಹೆಬ್ಬಾಳ ಕ್ಷೇತ್ರದಲ್ಲಿ ರೆಹಮಾನ್ ಷರೀಫ್ ಸೋಲಿಗೆ ಎಚ್ಡಿಕೆ ಕಾರಣ. ಅಬ್ದುಲ್ ಅಜೀಂರನ್ನು ರೆಹಮಾನ್ ಷರೀಫ್ ವಿರುದ್ಧ ನಿಲ್ಲಿಸಿ ಸೋಲಿಸಿದ್ದು ಎಚ್ಡಿಕೆ. ರೆಹಮಾನ್ ಸೋಲಿಗೆ ಕಾರಣ ಸಿದ್ದರಾಮಯ್ಯ ಅಲ್ಲ, ಎಚ್ಡಿಕೆ ಅವರೊಬ್ಬ ಡೀಲರ್. ಅವರು ರಾಜಕೀಯ ಲಾಭ ಇಲ್ಲದಿದ್ರೆ ಏನೂ ಮಾಡಲ್ಲ. ದೇವೇಗೌಡರಿಗೆ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದೆ ದೇವೇಗೌಡರಿಗೆ ಇರೋ ಕಾಳಜಿಯಲ್ಲಿ 1% ಕಾಳಜಿಯೂ ಕುಮಾರಸ್ವಾಮಿಗೆ ಇಲ್ಲ ಎಂದು ಟೀಕಿಸಿದರು.
ಕುಮಾರಸ್ವಾಮಿ ಹಾಸನದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಿ ನೋಡೋಣ. ರಾಮನಗರ, ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಿ ನೋಡೋಣ. ಈ ಜಿಲ್ಲೆಗಳಲ್ಲಿ ಟಿಕೆಟ್ ಕೊಟ್ರೆ ಇವ್ರಿಗೆ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದೆ ಎಂದು ಒಪ್ಪಿಕೊಳ್ಳಬಹುದು. ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಏನು ಮಾಡಿದಾರೆ? ಸ್ವಾತಂತ್ರ್ಯ ನಂತರ ಅಲ್ಪಸಂಖ್ಯಾತ ನಾಯಕ ಅಂದ್ರೆ ಸಿದ್ದರಾಮಯ್ಯ ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಸಿದ್ದರಾಮಯ್ಯ ಮಾಡಿರುವ ಅಭಿವೃದ್ಧಿ ಕೆಲಸ ಬೇರೆ ಯಾರೂ ಮಾಡಿಲ್ಲ. ಕುಮಾರಸ್ವಾಮಿ ಅಲ್ಪಸಂಖ್ಯಾತರ ವಿರೋಧಿ ಎಂದು ಗುಡುಗಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಮತ ಪಡೆಯಲು ಸಿದ್ದರಾಮಯ್ಯ, ಕುಮಾರಸ್ವಾಮಿ RSS ಟೀಕೆ: ಪ್ರಹ್ಲಾದ್ ಜೋಶಿ
ಅಲ್ಪಸಂಖ್ಯಾತ ಸಮಯದಾಯ ಸಿದ್ದರಾಮಯ್ಯ ಒಬ್ಬರ ಮಾತು ಮಾತ್ರ ಕೇಳುತ್ತೆ. ಇನ್ಯಾವ ನಾಯಕರ ಮಾತನ್ನೂ ನಮ್ಮ ಸಮಾಜ ಒಪ್ಪಲ್ಲ. ನನ್ನ ಮಾತನ್ನೂ ನಮ್ಮ ಸಮಾಜ ಕೇಳಲ್ಲ. ತಿಪ್ಪರಲಾಗ ಹಾಕಿದ್ರೂ ನಮ್ಮ ಸಮಾಜ ಕುಮಾರಸ್ವಾಮಿ ಮಾತು ಕೇಳಲ್ಲ. ನಮ್ಮ ಸಮಾಜಕ್ಕೆ ಸಿದ್ದರಾಮಯ್ಯ ಅಂದರೆ ಪ್ರಾಣ. ಇದನ್ನು ಕುಮಾರಸ್ವಾಮಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಹಾಗಾಗಿ ಎಚ್ಡಿಕೆ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಕೆಂಡಕಾರಿದ್ದಾರೆ.