ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಮತ್ತೆ ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ತಮ್ಮ ಮುನಿಸನ್ನ ತೋರಿಸಿದ್ದಾರೆ. ಇಂದು ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುತ್ಧಳಿ ಲೋಕಾರ್ಪಣೆ ಕಾರ್ಯಕ್ರಮದ ಬ್ಯಾನರ್ ಗಳಲ್ಲಿ ಸಿಎಂ ಫೋಟೋವನ್ನ ಮುದ್ರಿಸಿರಲಿಲ್ಲ. ಕಾರ್ಯಕ್ರಮದ ವೇದಿಕೆಯ ಬ್ಯಾನರ್ ನಲ್ಲಿ ಸಿಎಂ ಯಡ್ಡಿಯೂರಪ್ಪ ಭಾವಚಿತ್ರ ಹಾಕದೆ ಎಲ್ ಕೆ ಆಡ್ವಾಣಿ, ಮೋದಿ, ಅಮಿತ್ ಶಾ ಭಾವಚಿತ್ರ ಮಾತ್ರ ಮುದ್ರಣ ಮಾಡಲಾಗಿತ್ತು.
Advertisement
ಶಾ ಬರೋದಕ್ಕೆ ಮೊದಲೇ ಬದಲಾವಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬರೋದಕ್ಕೂ ಮೊದಲೇ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಅಮಿತ್ ಶಾ ಜ.16ಕ್ಕೆ ವಿಜಯಪುರಕ್ಕೂ ಬರುತ್ತಿದ್ದಾರೆ. ಸಂಕ್ರಮಣಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುತ್ತೋ ಅಥವಾ ಬದಲಾವಣೆ ಆಗುತ್ತೋ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆಗಿಂತಲೂ ಮತ್ತೇನಾದರೂ ಆಗಬಹುದು. ಉತ್ತರ ಕರ್ನಾಟಕ, ವಿಜಯಪುರ ಜಿಲ್ಲೆಗೆ ಒಳಿತಾಗಲಿದೆ ಎಂದು ಹೇಳಿದರು.
Advertisement
Advertisement
ಶಾಲೆ ಪ್ರಾರಂಭಕ್ಕೆ ಸಲಹೆ: ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ಮುಖ್ಯ. ನಾನು ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಒಂದು ವರ್ಷ ಶಿಕ್ಷಣ ಸಂಸ್ಥೆಗಳಿಗೆ ಹಾನಿಯಾದ್ರೂ ನಾವು ಸಹಿಸಿಕೊಳ್ಳಬಹುದು. ಆದರೆ ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು. ಇಂದಿನ ಕಾಲದಲ್ಲಿ ಕುಟುಂಬದಲ್ಲಿ ಒಂದು ಅಥವಾ ಎರಡು ಮಕ್ಕಳು ಮಾತ್ರ ಇವೆ. ಹಿಂದಿನ ಕಾಲದಲ್ಲಿ ನಾಲ್ಕೈದರಿಂದ ಹತ್ತರವರೆಗೆ ಮಕ್ಕಳಿರುತ್ತಿದ್ದವು. ಹೀಗಾಗಿ ಪಾಲಕರು ಅತ್ಯಂತ ಜೋಪಾನವಾಗಿ ಮಕ್ಕಳನ್ನು ಬೆಳೆಸಿರುತ್ತಾರೆ. ಕೋವಿಡ್ ನಿಂದ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ವೈದ್ಯರಿಂದ ಹಾಗೂ ಎಲ್ಲರ ಮಾಹಿತಿ ತೆಗೆದುಕೊಂಡು ನಿರ್ಣಯ ಮಾಡಬೇಕು ಎಂದು ಶಾಲೆಗಳ ಪ್ರಾರಂಭಕ್ಕೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.
Advertisement
ವಾಜಪೇಯಿ ಪುತ್ಧಳಿ ಲೋಕಾರ್ಪಣೆ: ನಗರದ ಗಾಂಧಿ ಚೌಕನಿಂದ ಕಿರಣ್ ಮಾರುಕಟ್ಟೆವರೆಗಿನ 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ 2 ಕಿ.ಮೀ ಉದ್ದದ ರಸ್ತೆಯನ್ನು ಮತ್ತು ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇತಯಿ ಅವರ ಪುತ್ಥಳಿ ಲೋಕಾರ್ಪಣೆ ಮಾಡಲಾಯ್ತು. ಅಟಲ್ ಬಿಹಾರಿ ವಾಜಪೇಯಿ ಮಾರ್ಗವನ್ನ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಲೋಕಾರ್ಪಣೆ ಮಾಡಲಾಯಿತು. ನಂತರ ದಿವಂಗತ ಅಟಲ ಬಿಹಾರಿ ವಾಜಪೇಯಿ ಮೂರ್ತಿಯನ್ನ ಲೋಕಾರ್ಪಣೆ ಮಾಡಲಾಯಿತು.
6 ಅಡಿ ಎತ್ತರದ ಕಟ್ಟೆಯ ಮೇಲೆ ನಿಂತಿರುವ, 6 ಅಡಿ ಎತ್ತರದ ವಾಜಪೇಯಿ ಮೂರ್ತಿ ಇದಾಗಿದ್ದು, ಸುಮಾರು 400 ಕೆಜಿ ತೂಕವನ್ನು ಹೊಂದಿದೆ. ಒಟ್ಟು ರೂ. 6.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದೆ. ರೂ. 2.80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಟ್ಟೆಯ ಮೇಲೆ ಮೂರ್ತಿ ಸ್ಥಾಪನೆ ಮಾಡಲಾಯಿತು. ಮೂರ್ತಿ, ಕಟ್ಟೆಯ ನಿರ್ಮಾಣದ ಸಂಪೂರ್ಣ ಹಣವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ್ದಾರೆ.