Connect with us

Districts

ಸಿಎಂ ಬಿಎಸ್‍ವೈ ಸಚಿವ ಸಂಪುಟ ತೆರೆದ ಪುಸ್ತಕ ಇದ್ದಂತೆ- ಸಿದ್ದುಗೆ ಸೋಮಣ್ಣ ತಿರುಗೇಟು

Published

on

– ಇಷ್ಟಕ್ಕೆ ಇತಿಶ್ರೀ ಹಾಡಿ ಅಧಿವೇಶನದಲ್ಲಿ ಚರ್ಚಿಸಿ

ಮಡಿಕೇರಿ: ಸಂದಿಗ್ಧ ಪರಿಸ್ಥಿತಿಯಲ್ಲಿ ಮೊಸರಲ್ಲಿ ಕಲ್ಲನ್ನು ಹುಡುಕುವ ಕೆಲಸವನ್ನು ಮಾಡಬಾರದು ಎಂದು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯಹಾರ ನಡೆದಿದೆ ಎನ್ನುವ ವಿರೋಧ ಪಕ್ಷದವರ ಆರೋಪಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

ಮಡಿಕೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರ ಸಚಿವ ಸಂಪುಟ ತೆರೆದ ಪುಸ್ತಕ ಇದ್ದಂತೆ. ಭ್ರಷ್ಟಾಚಾರ ನಡೆದಿದ್ದರೆ ಯಾರು ಬೇಕಾದರೂ ಪರಿಶೀಲಿಸಬಹುದು. ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವರು, ಡಿಸಿಎಂ ಆರ್ ಅಶೋಕ್ ಇತರರು ಉತ್ತರ ನೀಡಿದ್ದಾರೆ. ಕೊರೊನಾದಂತಹ ಆತಂಕದ ಸ್ಥಿತಿಯಲ್ಲಿ ಜನತೆ ಸಂಕಷ್ಟದಲ್ಲಿದ್ದಾರೆ. ಇನ್ನೇನು ಅಧಿವೇಶನ ಶುರುವಾಗಲಿದ್ದು, ಅದರಲ್ಲಿ ಚರ್ಚಿಸಿ. ಸಿದ್ದರಾಮಯ್ಯ ಅವರು ಇಷ್ಟಕ್ಕೆ ಇತಿಶ್ರೀ ಹಾಡಬೇಕು. ಇಷ್ಟಾದ ಮೇಲೂ ಅವರು ಮಾತನಾಡಿದ್ರೆ ಅವರು ದಡ್ರೋ ಅಥವಾ ಬುದ್ಧಿವಂತರೊ ತಿಳಿಯುತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.

ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದೆ. ಒಂದೆಡೆ ಬರ ಮತ್ತೊಂದೆಡೆ ಕೊರೊನಾದಂತಹ ಸಂಕಷ್ಟದಲ್ಲಿ ಸಿಎಂ ಯಡಿಯೂ ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸರ್ಕಾರದ ಸಾಧನೆಗಳನ್ನು ಫಲಾನುಭವಿಗಳೇ ವಿವರಿಸಿದ್ದಾರೆ. ಕೊಡಗು ಭೌಗೋಳಿಕವಾಗಿ ವಿಶಿಷ್ಠವಾದ ಜಿಲ್ಲೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದೆ. ಮಳೆಯಿಂದ ಹಾನಿಗೊಳಗಾದ ರಸ್ತೆಣ ಮೂಲ ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದನ್ನೂ ಓದಿ: ಕೊರೊನಾ ಹೆಸರಲ್ಲಿ ಬಿಜೆಪಿ ಸರ್ಕಾರದಿಂದ 2 ಸಾವಿರ ಕೋಟಿ ಲೂಟಿ

10.78 ಲಕ್ಷ ರೂಪಾಯಿಗಳನ್ನು ಮಡಿಕೇರಿಯ ಕೋಟೆಯ ಪುನಶ್ಚೇತನಕ್ಕೆ ನೀಡಿದೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಕಾವೇರಿ ನೀರಾವರಿ ನಿಗಮ 94 ವೆಚ್ಚದಲ್ಲಿ ಹೂಳೆತ್ತಲಾಗುತ್ತಿದೆ. 2333 ಮನೆಗಳನ್ನು ಕಳೆದುಕೊಂಡಿದ್ದರು. ಅಂತಹವರಿಗೆ 5 ಲಕ್ಷವನ್ನು ಮನೆಗಳ ನಿರ್ಮಾಣ ಹಾಗೆಯೇ ದುರಸ್ತಿಗೆ ಸರ್ಕಾರದಿಂದ ಹಸ್ತಾಂತರಿಸಿದ್ದೇವೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಈಗಾಗಲೇ ಗ್ರಾಮ ಪಂಚಾಯ್ತಿ ಪಟ್ಟಣ ಪಂಚಾಯ್ತಿ ಹಾಗೂ ನಗರಸಭೆಗಳಿಗೆ ಮುಂಗಡವಾಗಿ ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನು ಓದಿ: 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್‌ ಬಂದಿತ್ತಾ -ಕಾಂಗ್ರೆಸ್‌ ಆರೋಪಕ್ಕೆ ಅಶೋಕ್‌ ತಿರುಗೇಟು

ಕೊವೀಡ್ ನಿಯಂತ್ರಿಸಲು ಜಿಲ್ಲಾಡಳಿತ ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರತಿನಿತ್ಯ 600 ಜನರ ಗಂಟಲ ದ್ರವವನ್ನು ಪರೀಕ್ಷಿಸಲಾಗುತ್ತಿದೆ. ಮಿಗಿಲಾಗಿ ರೈತರಿಗೆ 79(ಎ) (ಬಿ) ಜಾರಿಗೊಳಿಸಿ 3 ಲಕ್ಷ ಬಾಕಿ ಉಳಿದಿದ್ದ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ಇತ್ಯರ್ಥಪಡಿಸಿದ್ದೇವೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ, ಗಿರಿಜನ ಕಾಲೂನಿಯ ರಸ್ತೆ, ಚರಂಡಿ ಹಾಗೂ ಅಂಗನವಾಡಿಗೆ ಸಮಾಜ ಕಲ್ಯಾಣ ಇಲಾಖೆವತಿಯಿಂದ 10 ಕೋಟಿ ಬಿಡುಗಡೆ ಮಾಡಿದ್ದೇವೆ. ಮಿಗಿಲಾಗಿ ಎಪಿಎಂಸಿ ಕಾಯ್ದೆ ಜಾರಿಗೆ ತಂದು ನನ್ನ ಬೆಳೆ ನನ್ನ ಹಕ್ಕನ್ನು ಅನ್ನದಾತನಿಗೆ ನೀಡಿದೆ ಎಂದರು.

Click to comment

Leave a Reply

Your email address will not be published. Required fields are marked *