ಬೆಳಗಾವಿ: ಸಿಎಂ ಬಿ.ಎಸ್.ಯಡಿಯೂಪ್ಪಗೆ ಡಿಸಿಎಂ ಲಕ್ಷ್ಮಣ ಸವದಿ ಮೇಲಿನ ಕೋಪ ಇನ್ನು ಕಡಿಮೆ ಆಗಿಲ್ವಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇಂದು ಮುಖ್ಯಮಂತ್ರಿಗಳು ನಡೆಸಿದ ವೈಮಾನಿಕ ಸಮೀಕ್ಷೆಯಲ್ಲಿ ಲಕ್ಷ್ಮಣ ಸವದಿಯನ್ನ ಜೊತೆಗೆ ಕರೆದುಕೊಂಡ ಹೋಗದಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಅವರನ್ನ ಸ್ವಾಗತಿಸಿಕೊಂಡ ಲಕ್ಷ್ಮಣ ಸವದಿ ವೈಮಾನಿಕ ಸಮೀಕ್ಷೆಗೆ ಜೊತೆಯಾಗಲಿಲ್ಲ. ಬದಲಾಗಿ ವಿಮಾನ ನಿಲ್ದಾಣದಿಂದ ಡಿಸಿಎಂ ಬೆಳಗಾವಿಯ ತಮ್ಮ ನಿವಾಸಕ್ಕೆ ಹಿಂದಿರುಗಿದರು. ಕೇವಲ ಸಚಿವರೊಂದಿಗೆ ಸಿಎಂ ವೈಮಾನಿಕ ಸಮೀಕ್ಷೆ ನಡೆಸಿ ಪ್ರವಾಹದ ಬಗ್ಗೆ ಮಾಹಿತಿ ಪಡೆದುಕೊಂಡರು. ಲಕ್ಷ್ಮಣ ಸವದಿ ಅವರನ್ನ ವೈಮಾನಿಕ ಸಮೀಕ್ಷೆಗೆ ಕರೆದೊಯ್ಯದ ಬಗ್ಗೆ ಕಮಲ ಪಾಳಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭಗೊಂಡಿವೆ.
Advertisement
Conducted aerial survey of Belagavi & Bagalkot districts and took stock of the situation. Our govt stands firmly with the affected people, will ensure they receive adequate relief & compensation. Ministers @RAshokaBJP, @RameshJarkiholi, @BSBommai joined me in the survey. pic.twitter.com/3XQjwHKZ0U
— B.S.Yediyurappa (@BSYBJP) August 25, 2020
Advertisement
ಯಾಕೆ ಮುನಿಸು?: ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಲಕ್ಷ್ಮಣ ಸವದಿ ಪಕ್ಷದ ಹಿರಿಯರನ್ನ ಭೇಟಿಯಾಗಿದ್ದರು. ಈ ವೇಳೆ ಸಿಎಂ ಪದವಿ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಹೈಕಮಾಂಡ್ ಕೃಪೆಯಿಂದ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಸಿಎಂ ಕುರ್ಚಿಯ ಮೇಲೆ ಕಣ್ಣೀಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೇ ವಿಷಯವಾಗಿ ಯಡಿಯೂರಪ್ಪನವರು ಡಿಸಿಎಂ ಮೇಲೆ ಮುನಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.