ನವದೆಹಲಿ: ಪ್ರತಿ ದಿನ 1 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವರ್ಚೂವಲ್ ಸಭೆ ನಡೆಸಲಿದ್ದು, ಎಲ್ಲರ ಚಿತ್ತ ನೆಟ್ಟಿದೆ.
ದಾಖಲೆ ಪ್ರಮಾಣದಲ್ಲಿ ದಾಖಲಾಗುತ್ತಿರುವ ಸೋಂಕು ನಿಯಂತ್ರಣಕ್ಕಾಗಿ ಹೊಸದಾಗಿ ಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ದೇಶದಲ್ಲಿ ಟಫ್ ರೂಲ್ಸ್ ಜಾರಿ ಮಾಡ್ತಾರೋ? ಅಥ್ವಾ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಘೋಷಣೆ ಮಾಡ್ತಾರೋ ಎಂಬ ಪ್ರಶ್ನೆ ಎದ್ದಿದೆ.
Advertisement
Advertisement
ಆರ್ಥಿಕತೆಗೆ ಪೆಟ್ಟು ಬೀಳದ ರೀತಿಯಲ್ಲಿ ಅಂದ್ರೆ ಜೀವ ಮತ್ತು ಜೀವನ ಎರಡನ್ನೂ ಪರಿಗಣಿಸಿ ಮೋದಿ ಒಂದು ಕ್ರಮ ತೆಗೆದುಕೊಳ್ಳಬಹುದು. ಲಾಕ್ಡೌನ್ನಂತಹ ಕಠಿಣ ಕ್ರಮಗಳಿಗೆ ಮೋದಿ ಈ ಬಾರಿ ಮುಂದಾಗದೇ ಇರಬಹುದು ಎಂಬ ಮಾತು ಕೇಳಿಬರುತ್ತಿದೆ.
Advertisement
ಒಂದು ವೇಳೆ ಇಡೀ ದೇಶದಲ್ಲಿ ಒಂದು ತಿಂಗಳ ಕಾಲ ಲಾಕ್ಡೌನ್ ಏನಾದ್ರೂ ವಿಧಿಸಿದ್ರೆ, ದೇಶದ ಜಿಡಿಪಿ ದರ 2% ಕುಸಿಯಬಹುದು, ಹಣದುಬ್ಬರ ಮತ್ತಷ್ಟು ಹೆಚ್ಚಾಗಬಹುದು ಎಂಬ ವಿಶ್ಲೇಷಣೆಗಳು ಕೇಳಿ ಬಂದಿದೆ.
Advertisement
ಈ ಹಿಂದೆ ಜಾರಿ ಮಾಡಿದ್ದ ಲಾಕ್ಡೌನ್ನಿಂದಲೇ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ಸಣ್ಣ ಪ್ರಮಾಣದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಇಂತಹ ಹೊತ್ತಲ್ಲಿ ಸೋಂಕು ಪ್ರಮಾಣ ತೀವ್ರವಾಗಿ ಹೆಚ್ಚುತ್ತಿದೆ. ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು ಎಂದು ಪರಿಣಿತರು ಅಂದಾಜಿಸಿದ್ದಾರೆ.
ನಾಳೆ ಏನಾಗಬಹುದು?
– 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಘೋಷಣೆ..!
– ಸೋಂಕು ಹೆಚ್ಚಿರುವ ಕಡೆ ಲಿಮಿಟೆಡ್ ಲಾಕ್ಡೌನ್
– ಕೊರೋನಾ ಭೀಕರತೆ ಅರಿವು ಮೂಡಿಸಲು ನೈಟ್ ಕರ್ಫ್ಯೂ
– ಮಹಾರಾಷ್ಟ್ರ ಮಾದರಿಯಲ್ಲಿ ಎಲ್ಲೆಡೆ ವೀಕ್ ಎಂಡ್ ಕರ್ಫ್ಯೂ