ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರ ಹಾಗೂ ಕುಪ್ವಾರದಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಮೂವರು ಉಗ್ರರು ಹತರಾದ ನಂತರ ಇಬ್ಬರ ಬಳಿ ಅಪಾರ ಪ್ರಮಾಣದ ಮದ್ದು, ಗುಂಡು ಹಾಗೂ ಶಸ್ತ್ರಸ್ತ್ರಗಳು ಸಿಕ್ಕಿವೆ.
ಬುಧವಾರ ಹಂದ್ವಾರ ಹಾಗೂ ಕುಪ್ವಾರದಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ಎಲ್ಇಟಿ ಉಗ್ರರು ಹತರಾಗಿದ್ದು, ಇವರಿಂದ ಅಪಾರ ಪ್ರಮಾಣದ ಮದ್ದು, ಗುಂಡು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾವನ್ನಪ್ಪಿದವರಲ್ಲಿ ಎಲ್ಇಟಿ ಕಮಾಂಡರ್ ನಸೀರ್ ಉದ್ದಿನ್ ಲೋನ್ ಒಬ್ಬ. ಈತ ಈ ಹಿಂದೆ ಹಲವು ಸಿಆರ್ಪಿಎಫ್ ಯೋಧರ ಹುತಾತ್ಮರಾದ ಪ್ರಕರಣದಲ್ಲಿ ಭಾಗಿಯಾಗಿದ್ದ.
Advertisement
Jammu & Kashmir: Arms & ammunition recovered from the two LeT terrorists, who were killed in an encounter with security forces in Handwara of Kupwara district yesterday. Top LeT Commander Naseer-u-din Lone, who was involved in the killing of CRPF jawans, was among those killed. pic.twitter.com/auX51asChh
— ANI (@ANI) August 20, 2020
Advertisement
ಜಮ್ಮು ಕಾಶ್ಮೀರದ ಕುಲ್ಗಮ್ ಹಾಗೂ ಹಂದ್ವಾರದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಒಟ್ಟು ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿದ್ದು, ಈ ವೇಳೆ ಉಗ್ರರನ್ನು ಹತ್ಯೆ ಮಾಡಲಾಗಿದೆ. ಒಬ್ಬ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರ ಸಾವನ್ನಪ್ಪಿದ್ದು, ಅದೇ ಸ್ಥಳದಲ್ಲಿ ಸಿಕ್ಕಿಬಿದ್ದ ಇನ್ನಿಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
Advertisement
ಮತ್ತೊಂದು ಘಟನೆಯಲ್ಲಿ ಇಬ್ಬರು ಎಲ್ಇಟಿ ಉಗ್ರರು ಹತರಾಗಿದ್ದಾರೆ. ಜಮ್ಮು ಕಾಶ್ಮೀರದ ಹಂದ್ವಾರಾದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಸಾವನ್ನಪ್ಪಿದ ಇಬ್ಬರ ಪೈಕಿ ಒಬ್ಬನನ್ನು ಎಲ್ಇಟಿ ಕಮಾಂಡರ್ ನಸೀರ್ ಉದ್ದೀನ್ ಲೋನ್ ಎಂದು ಗುರುತಿಸಲಾಗಿದೆ. ಈತ ಸೋಪೂರ್ ಹಾಗೂ ಹಂದ್ವಾರದಲ್ಲಿ ಸೈನಿಕರ ಹುತಾತ್ಮರಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಹಂದ್ವಾರದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ ಎಲ್ಇಟಿ ಕಮಾಂಡರ್ ನಸೀರ್ ಉದ್ದಿನ್ ಲೋನ್ ಏಪ್ರಿಲ್ 18ರಂದು ಮೂವರು ಹಾಗೂ ಮೇ 4ರಂದು ಸೊಪೂರದಲ್ಲಿ ಮೂವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಜಮ್ಮು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.