ಬಾತುಕೋಳಿಗಳು, ಮೀನುಗಳು ಈಜುತ್ತವೆ ಎಂದು ನಮಗೆ ಗೊತ್ತು ಆದರೆ ಕೆರಿಬಿಯನ್ ಸಾಗರದ ನೀರೊಳಗೆ ಮೀನೊಂದು ನಡೆಯುತ್ತಿರುವ ವಿಚಿತ್ರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ವೀಡಿಯೋದಲ್ಲಿ ಮೀನು ಹಿಮ್ಮುಖದಂತಹ ರೆಕ್ಕೆಗಳನ್ನು ಬಳಸಿ ನಡೆದುಕೊಂಡು ಸಾಗರದ ಆಳದಲ್ಲಿ ಮುಂದೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಮಿಕ್ಕಿ ಚಾರ್ಟೆರಿಸ್ ಎಂಬ ವ್ಯಕ್ತಿ ಮೀನಿನ ಈ ವಿಚಿತ್ರ ಚಲನೆಯನ್ನು ಕಂಡು “ಕೆರಿಬಿಯನ್‍ನ ವಿಚಿತ್ರವಾದ ಮೀನು” ಎಂದು ಕರೆದಿದ್ದಾನೆ. ಚಾರ್ಟೆರಿಸ್ ತನ್ನ ಜೀವನವನ್ನು ಸಮುದ್ರ ಅನ್ವೇಷಿಸಲು ಕಳೆದಿದ್ದಾನೆ. ಆದರೂ ಇದು ಅವನಿಗೆ ವಿಚಿತ್ರ ಅನುಭವವಾಗಿದೆ ಎಂದು ಹೇಳಿದ್ದಾನೆ.
Advertisement
ಈ ಪ್ರಾಣಿಯು ಶಾರ್ಟ್‍ನೋಸ್ ಬ್ಯಾಟ್‍ಫಿಶ್ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಮೀನು ಬೇಟೆಯಾಡಲು ನಿಧಾನವಾಗಿ ಕ್ರಮಬದ್ಧವಾಗಿ ನಡೆಯುತ್ತದೆ. ಇದು ಹೆಚ್ಚಾಗಿ ಸಣ್ಣ ಏಡಿಗಳು ಮತ್ತು ಮೀನುಗಳನ್ನು ತಿನ್ನುತ್ತದೆ. ಈ ಮೀನು ಯಾವಾಗಲೂ ನಡೆಯುವುದಿಲ್ಲ. ದೊಡ್ಡ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿ ಮತ್ತು ಆಹಾರ ಹುಡುಕುವಾಗ ಕೆಲವೊಮ್ಮೆ ಮೀನುಗಳು ನಡೆಯುತ್ತದೆ. ಈ ಮೀನು ಕಂದು ಬಣ್ಣದ ಸ್ಪಂಜಿನ ಉಂಡೆಯನ್ನು ಹೋಲುತ್ತದೆ ಎಂದು ಚಾರ್ಟೆರಿಸ್ ಹೇಳಿದ್ದಾರೆ.
Advertisement
ವೈರಲ್ ವೀಡಿಯೋನಲ್ಲಿ ಏನಿದೆ?
ಸಾಗರದ ಆಳದಲ್ಲಿ ಮೀನೊಂದು ಹಿಮ್ಮುಖವಾದಂತಹ ರೆಕ್ಕೆಗಳ ಸಹಾಯದಿಂದ ನಡೆಯುತ್ತಿದೆ. ಇದು ಇತರ ಪ್ರಾಣಿಗಳಂತೆ ಹೆಜ್ಜೆ ಹಾಕುತ್ತಾ ನೀರಿನಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಮೀನು ಗಾಳಿಗುಳ್ಳೆಯ ರಚನೆಯನ್ನು ಹೊಂದಿರುತ್ತವೆ ಈಜಲು ಸಹಾಯವಾಗುತ್ತದೆ ಆದರೆ ಇದರಲ್ಲಿ ಅಂತಹ ರಚನೆಯನ್ನು ಹೊಂದಿಲ್ಲ. ಇದರ ರಕ್ಕೆಗಳು ಕೆಳ ಮುಖವಾಗಿದೆ. ಈಜುವಂತೆ ಇಲ್ಲ, ಬದಲಾಗಿ ಇದರ ರೆಕ್ಕೆ ನಡೆಯಲು ಸಹಾಯವಾಗುವಂತೆ ಇದೆ.
Advertisement
ಮೀನು ಈಜುತ್ತದೆ ಎಂದು ಇಷ್ಟು ದಿನ ಕೇಳಿರುವವರಿಗೆ ಮೀನು ನಡೆಯುವ ವೀಡಿಯೋವನ್ನು ಸೊಷೀಯಲ್ ಮೀಡಿಯಾದಲ್ಲಿ ನೋಡಿರುವ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಮೀನು ನಡೆಯುತ್ತಿರುವ ಈ ವೀಡಿಯೋಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.
Advertisement
#CDN37 Mickey Charteris, un experimentado buzo, grabó imágenes de un extraño pez que “camina” por el fondo marino usando sus aletas como patas.
La especie, conocida como pez murciélago o diablo, generalmente “camina” en busca de presas tales como cangrejos y peces pequeños. pic.twitter.com/KJOPEIk5fR
— CDN 37 (@CDN37) November 13, 2020