Connect with us

Corona

ಸಹೋದರಿಗೆ ವಿಶೇಷ ಬೌಲಿಂಗ್ ಮಾಡಿದ ಹ್ಯಾಟ್ರಿಕ್ ಹೀರೋ- ವಿಡಿಯೋ

Published

on

ಲಕ್ನೋ: ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹರ್ ತಮ್ಮ ಸಹೋದರಿಗೆ ವಿಶೇಷ ಬೌಲಿಂಗ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೊರೊನಾ ಲಾಕ್‍ಡೌನ್‍ನಿಂದಾಗಿ ಟೀಂ ಇಂಡಿಯಾ ಆಟಗಾರರಂತೆ ದೀಪಕ್ ಚಹರ್ ಕೂಡ ಮನೆಯಲ್ಲೇ ಉಳಿದಿದ್ದರು. ಆದರೆ ವೇಗದ ಬೌಲರ್ ದೀಪಕ್ ಮಂಗಳವಾರ ಬೌಲಿಂಗ್ ಅಭ್ಯಾಸ ನಡೆಸಿದ್ದು, ತಮ್ಮ ಸಹೋದರಿ ಮಾಲತಿ ಅವರಿಗೆ ಬೌಲಿಂಗ್ ಮಾಡಿದ್ದಾರೆ. ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಮಾಲತಿ, ‘ನಾವು ಐಪಿಎಲ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂಬ ಬರೆದುಕೊಂಡಿದ್ದಾರೆ.

Advertisement
Continue Reading Below

ವಿಡಿಯೋದಲ್ಲಿ ದೀಪಕ್ ಚಹರ್ ವೇಗವಾಗಿ ಬಂದು ಚೆಂಡನ್ನು ಎಸೆಯದೆ ನಿಂತರು. ಬಳಿಕ ಮಕ್ಕಳಿಗೆ ಬೌಲಿಂಗ್ ಮಾಡುವಂತೆ ಬ್ಯಾಟಿಂಗ್ ಮಾಡುತ್ತಿದ್ದ ಮಾಲತಿ ಅವರತ್ತ ಚೆಂಡನ್ನು ಎಸೆದರು. ಈ ವಿಡಿಯೋಗೆ ಕಮೆಂಟ್ ಮಾಡಿರುವ ಚಹರ್, ‘ಬೌಲಿಂಗ್ ಮಾಡುವಾಗ ನಾನು ಎಂದಿಗೂ ಇಷ್ಟು ಒತ್ತಡಕ್ಕೆ ಒಳಗಾಗಲಿಲ್ಲ’ ಎಂದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಕಳೆದ ವರ್ಷದ ನಡೆದ ಮೂರನೇ ಟಿ20 ಪಂದ್ಯದಲ್ಲಿ ದೀಪಕ್ ಚಹರ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲದೆ ಕೇವಲ 7 ರನ್ ನೀಡಿ 6 ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದ್ದರು. ಇದಕ್ಕೂ ಮುನ್ನ ಶ್ರೀಲಂಕಾದ ಅಜಂತ ಮೆಂಡೀಸ್ 8 ರನ್ ನೀಡಿ 6 ವಿಕೆಟ್ ಪಡೆದಿದ್ದರು.

View this post on Instagram

???????????? We miss IPL???? ???? # ipl #csk

A post shared by Malti Chahar(Meenu) (@maltichahar) on

Click to comment

Leave a Reply

Your email address will not be published. Required fields are marked *