ಬೆಂಗಳೂರು: ನಾನು ಸರ್ಕಾರವನ್ನೇ ಬೀಳಿಸಿ ಬೇರೆ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇನೆ. ಅಂತದರಲ್ಲಿ ಇದು ಯಾವ ಲೆಕ್ಕ ಎಂಬುದಾಗಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
Advertisement
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಕೇಸ್ ದಾಖಲು ಮಾಡಿರುವುದು ನಾನು. ನನ್ನ ಕೇಸ್ ಮೊದಲು ತನಿಖೆಯಾಗಬೇಕು. ಇಂತಹ ಇನ್ನು 10 ಸಿಡಿ ಬರಲಿ ನಾನು ಹೆದರುವುದಿಲ್ಲ. ನಾನು ಮಾನಸಿಕವಾಗಿ ತಯಾರಾಗಿದ್ದೇನೆ. ಮುಂದೆ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
Advertisement
Advertisement
ನಾನು ಪೊಲೀಸ್ ಕಮೀಷನರ್ ಗೆ ಮನವಿ ಮಾಡಿಕೊಳ್ಳುತ್ತೇನೆ ನನ್ನ ತಪ್ಪಿಲ್ಲ. ನನ್ನ ತಪ್ಪಿದ್ದರೆ ನಾನೇ ಬಂದು ಹಾಜರಾಗುತ್ತೇನೆ. ನಾನು ತಪ್ಪು ಮಾಡಿಲ್ಲ ತಪ್ಪಿದ್ರೆ ನೇಣು ಹಾಕಿಕೊಂಡು ಸಾಯುವುದಾಗಿ ಹೇಳಿಕೆ ನೀಡಿದ್ದಾರೆ.
Advertisement
ನನ್ನ ಮೇಲೆ ರೇಪ್ ಕೇಸ್ ಹಾಕಲಿ ನಾನು ರೆಡಿ. ನಾನು ಜಾಮೀನು ಪಡೆಯುವುದಿಲ್ಲ ವಕೀರನ್ನು ಭೇಟಿ ಮಾಡುತ್ತೇನೆ. ನಂತರ ಕಾನೂನು ಪ್ರಕಾರ ಮುಂದಿನ ಹೋರಾಟ ನಡೆಸುತ್ತೇನೆ. ಆಕೆ ಸಂತ್ರಸ್ತೆ ಆಗಿದ್ದರೆ ಮೊದಲೇ ದೂರು ಕೊಡಬೇಕಿತ್ತು ಈಗ ಯಾಕೆ ದೂರು ಕೊಟ್ರು? ನಾನು ಎಲ್ಲದ್ದಕ್ಕೂ ಸಿದ್ಧನಿದ್ದೇನೆ. ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದೆ. ನಾನು ಎಲ್ಲವನ್ನು ಎದುರಿಸುತ್ತೇನೆ ಎಂದರು.
ಜಗತ್ತಿಗೆ ಬೆತ್ತಲು ಪ್ರದರ್ಶನ ಮಾಡಿರೋರ ಹೇಳಿಕೆಗೆ ಮಹತ್ವ ಕೊಡೋದು ದೊಡ್ಡದಲ್ಲ. ನಾನು ಯಾವುದಕ್ಕೂ ಹೆದರುವುದಿಲ್ಲ. ನನಗೇನು ಒತ್ತಡ ಇಲ್ಲ. ಇದು ಅವರ ಕೊನೆ ಆಟ. ಇನ್ನು ಮುಂದೆ ನಮ್ಮ ಆಟ ಪ್ರಾರಂಭ ಮಾಡ್ತೀವಿ. ಇದೇ ರೀತಿ ಮಾಡುತ್ತಾರೆ ಎಂದು ನಮಗೂ ಗೊತ್ತಿತ್ತು. ಇದಕ್ಕೆ ನಾವು ತಯಾರು ಆಗಿದ್ದೇವೆ. ನಾವು ಎಲ್ಲವನ್ನು ಎದುರಿಸುತ್ತೇವೆ. ಈಗಾಗಲೇ ಇದರ ಹಿಂದೆ ಯಾರು ಇದ್ದಾರೆ ಅಂತ ಸಿಎಂ, ಗೃಹಮಂತ್ರಿಗಳಿಗೆ ಹೇಳಿದ್ದೇನೆ. ನಾನು ಕೊಟ್ಟ ದೂರಿನ ಬಗ್ಗೆ ಮೊದಲು ಕಮೀಷನರ್ ಕ್ರಮ ತೆಗೆದುಕೊಳ್ಳಬೇಕು. ನಾನು ಸದಾಶಿವನಗರ ಮನೆಯಲ್ಲಿ ಇರುತ್ತೇನೆ. ಎಲ್ಲವನ್ನು ಎದುರಿಸಲು ನಾನು ಸಿದ್ದ. ನಾನು ಎಲ್ಲೂ ಹೋಗುವುದಿಲ್ಲ. ಇದು ಮಹಾ ಷಡ್ಯಂತ್ರ ಎಂದು ಆರೋಪಿಸಿದರು.