ಬೆಂಗಳೂರು: ಕೊರೊನಾ ಅನ್ಲಾಕ್ 2 ನಲ್ಲಿ ರಾಜ್ಯ ಸರ್ಕಾರ ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿಸಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ವೀಕೆಂಡ್ ಕರ್ಫ್ಯೂ ಬಳಿಕ ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ. ಈ ಮಧ್ಯೆ ಬಿಎಂಟಿಸಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಶೇ.100 ಪ್ರಯಾಣಿಕರನ್ನು ಬಸ್ನಲ್ಲಿ ತುಂಬಿಕೊಂಡು ಸಾಗುತ್ತಿದೆ.
Advertisement
ಶುಕ್ರವಾರ ಸಂಜೆಯಿಂದ ವೀಕೆಂಡ್ ಕರ್ಫ್ಯೂ ಶುರುವಾದ ಬಳಿಕ ಬಿಎಂಟಿಸಿ ಬಸ್ಗಳ ಸಂಖ್ಯೆಯನ್ನು ಶೇ.30 ರಷ್ಟು ಕಡಿಮೆ ಮಾಡಿ 1000 – 1200 ಬಸ್ ಗಳನ್ನು ರಸ್ತೆಗೆ ಇಳಿಸಿತ್ತು. ಇಂದು ವೀಕೆಂಡ್ ಕರ್ಫ್ಯೂ ಕೊನೆಗೊಂಡಿದ್ದು, 3500 ರಿಂದ 4000 ಬಿಎಂಟಿಸಿ ಬಸ್ಗಳನ್ನು ರಸ್ತೆಗೆ ಇಳಿಸಿದೆ. ಸರ್ಕಾರ ಶೇ. 50 ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಲು ಆದೇಶ ನೀಡಿದೆ. ಆದರೆ ಸರ್ಕಾರ ಹೇಳಿದ್ದ ರೂಲ್ಸ್ ನ್ನು ಸಂಪೂರ್ಣವಾಗಿ ಬಿಎಂಟಿಸಿ ಬಸ್ ಸಿಬ್ಬಂದಿ ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನೂ ಓದಿ: ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಕಡಿತ
Advertisement
Advertisement
ಶೇ.50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ ಬಿಎಂಟಿಸಿಯಲ್ಲಿ ಶೇ.100 ರಷ್ಟು ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ಸರ್ಕಾರದ ಆದೇಶ ಒಂದೇ ವಾರಕ್ಕೆ ಹಳ್ಳ ಹಿಡಿದಿದೆ. ಕೊರೊನಾ ಇನ್ನೂ ಮುಗಿದಿಲ್ಲ, ಎರಡನೇ ಅಲೆ ಅಬ್ಬರ ಕಡಿಮೆಯಾಗಿದೆ. ಜೊತೆಗೆ ಮೂರನೇ ಅಲೆಯ ಆತಂಕದೊಂದಿಗೆ ಡೆಲ್ಟಾ ಪ್ಲಸ್ ವೈರಾಣುವಿನ ಭಯ ಕೂಡ ಶುರುವಾಗಿದೆ. ಇತಂಹ ಸಮಯದಲ್ಲಿ ಬಿಎಂಟಿಸಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಮತ್ತೆ ಕೊರೊನಾ ಕೇಸ್ ಹೆಚ್ಚಾಗಲು ಕಾರಣವಾಗುವ ಸಾಧ್ಯತೆಯಿದೆ.
Advertisement