– ಏಪ್ರಿಲ್ನಿಂದ ಅಕ್ಟೋಬರ್ ವರೆಗೆ ಸರ್ಕಾರದಿಂದ ವೈದ್ಯಕೀಯ ವೆಚ್ಚ ಮರುಪಾವತಿ
– ದಾಖಲೆ ಸಮೇತ ಶಾಸಕರ ಮುಖವಾಡ ಬಯಲು ಮಾಡುತ್ತೆ ಪಬ್ಲಿಕ್ ಟಿವಿ
ಬೆಂಗಳೂರು: ಕೊರೊನಾಗೆ ಸತ್ತವರು, ಚಿಕಿತ್ಸೆ ಸಿಗದೆ ಬಳಲಿದವರು, ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಹೈರಾಣದವರು ಎಷ್ಟೋ ಜನ ಇದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಹೈ ಟೆಕ್ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಲಕ್ಷಗಟ್ಟಲೆ ಬಿಲ್ ಮಾಡಿ ಇದನ್ನು ಪಾವತಿಸುವಂತೆ ಸರ್ಕಾರಕ್ಕೆ ನೀಡಿದ್ದಾರೆ. ಈ ಮೂಲಕ ಕೊರೊನಾ ಕಾಲದಲ್ಲಿ ಜನಪ್ರತಿನಿಧಿಗಳು ಆಸೆಬುರುಕತನದ ಕೆಲಸ ಮಾಡಿದ್ದಾರೆ.
ಏಪ್ರಿಲ್ 1ರಿಂದ ಅಕ್ಟೋಬರ್ ತನಕ ಬಿಲ್ ತೆಗೆದುಕೊಂಡವರ ಅಸಲಿ ಸ್ಟೋರಿಯನ್ನು ಪಬ್ಲಿಕ್ ಟಿವಿ ಬಿಚ್ಚಿಟ್ಟಿದೆ. ಸಾವಿರ ರೂಪಾಯಿಯನ್ನೂ ಬಿಟ್ಟಿಲ್ಲ, ಲಕ್ಷದ ತನಕ ಹಣ ಎಣಿಸಿದ್ದಾರೆ. ಇದನ್ನು ಪ್ರಶ್ನಿಸಿದರೆ ನಮ್ಮ ಹಕ್ಕು ಎನ್ನುತ್ತಾರೆ.
Advertisement
Advertisement
ಸರ್ಕಾರವೇ ಈಗ ವೆಚ್ಚ ಕಡಿತಕ್ಕೆ ಮುಂದಾಗಿದೆ. ಸರ್ಕಾರಿ ನೌಕರರ ಸಂಬಳ ವಿಳಂಬವಾಗಿ ಪಾವತಿ ಆಗುತ್ತಿದೆ. ಖಜಾನೆಯಲ್ಲಿ ಹಣವಿಲ್ಲದೇ ಸರ್ಕಾರ ಸಾಲಕ್ಕೆ ಮುಂದಾಗಿದೆ. ಇಂತ ಸಮಯದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಕ್ಕೆ ಸರ್ಕಾರದ ದುಡ್ಡು ಬೇಕೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
Advertisement
ಈ ಹಿಂದೆ ಖಾಸಗಿ ಆಸ್ಪತ್ರೆ ಬಿಲ್ ಕ್ಲೈಮ್ ಗೆ ಅರ್ಜಿ ಹಾಕಿದವರ ಜಾತಕವನ್ನು ನಿಮ್ಮ ಪಬ್ಲಿಕ್ ಟಿವಿ ಬಯಲು ಮಾಡಿತ್ತು. ಇದೀಗ ಮತ್ತೆ ವಿಧಾನಸಭೆ ಸಚಿವಾಲಯಕ್ಕೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರ ಬಿಲ್ ನೀಡಿದ್ದು, ಸರ್ಕಾರ ಇವರ ಹಣವನ್ನು ಪಾವತಿ ಮಾಡಿದೆ. ಹೀಗಾಗಿ ಇಲ್ಲಿ 2018ರ ಚುನಾವಣೆಯ ಸಂದರ್ಭದಲ್ಲಿ ಆಯೋಗಕ್ಕೆ ನೀಡಿದ ಆಸ್ತಿ ಮಾಹಿತಿ ಮತ್ತು ಸರ್ಕಾರಕ್ಕೆ ನೀಡಿದ ವೈದ್ಯಕೀಯ ಬಿಲ್ಗಳ ಮಾಹಿತಿಯನ್ನು ನೀಡಲಾಗಿದೆ.
Advertisement
ಟಾಪ್ 3 ಶಾಸಕರು:
ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ ಸುರಪುರದ ಬಿಜೆಪಿ ಶಾಸಕ ರಾಜುಗೌಡ ಹೆಚ್ಚು ಬಿಲ್ ಪಡೆದ ಶಾಸಕರಾಗಿದ್ದು, ಈ ಮೂಲಕ ಕೋವಿಡ್ ಸಂದರ್ಭದಲ್ಲಿ ಹೆಚ್ಚು ಬಿಲ್ ಪಡೆದ ಬಿರುದು ಇವರಿಗೆ ಸಲ್ಲುತ್ತದೆ. ಒಂದಲ್ಲ ಎರಡಲ್ಲ ಬರೋಬ್ಬರಿ 12 ಲಕ್ಷ ರೂ. ಬಿಲ್ ಪಡೆದಿದ್ದಾರೆ. ರಾಜುಗೌಡ ಬರೋಬ್ಬರಿ 12,89,146 ರೂ. ಪಡೆದಿದ್ದಾರೆ. ಕುಂದಾಪುರ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ 3,66,861 ರೂ. ಪಡೆದಿದ್ದಾರೆ. ಯಾದಗಿರಿಯ ಬಿಜೆಪಿ ಶಾಸಕ ವೆಂಕರೆಡ್ಡಿ ಮುದ್ನಾಳ್ 2,02,216 ರೂ. ಪಡೆದಿದ್ದಾರೆ. ಈ ಮೂವರು ಶಾಸಕರು ಹೆಚ್ಚು ವೈದ್ಯಕೀಯ ಬಿಲ್ ಪಡೆದ ಟಾಪ್ 3 ಪಟ್ಟಿಯಲ್ಲಿ ಇದ್ದಾರೆ.
3 ಶಾಸಕರ ವೈದ್ಯಕೀಯ ಬಿಲ್:
ಈ ಮೂವರು ಶಾಸಕರು 50 ಸಾವಿರ ರೂ. ವೈದ್ಯಕೀಯ ಬಿಲ್ ಹಣ ಪಡೆದಿದ್ದಾರೆ. ಮಂಡ್ಯದ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ 49, 816 ರೂ., ಶಿಡ್ಲಘಟ್ಟ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ 33, 545 ರೂ., ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ 23, 100 ರೂ. ವೈದ್ಯಕೀಯ ಬಿಲ್ ಹಣ ಪಡೆದಿದ್ದಾರೆ. 50 ಸಾವಿರ ರೂ. ಬಿಡದೆ ಬಿಲ್ ಹಣ ಪಡೆಯುವ ಮೂಲಕ ಸಣ್ಣ ಬುದ್ಧಿ ತೋರಿಸಿದ್ದಾರೆ.
1. ರಾಜೂಗೌಡ, ಸ್ಲಂ ಬೋರ್ಡ್ ಅಧ್ಯಕ್ಷ
ಸುರಪುರ, ಶಾಸಕ (ಬಿಜೆಪಿ)
ಬಿಲ್ ಮೊತ್ತ – 12,89,146 ರೂ.
(ಒಟ್ಟು ಆಸ್ತಿ – 8.45 ಕೋಟಿ ರೂ.)
2. ಸುಕುಮಾರ್ ಶೆಟ್ಟಿ
ಬೈಂದೂರು, ಶಾಸಕ (ಬಿಜೆಪಿ)
ಬಿಲ್ ಮೊತ್ತ – 3,66,861 ರೂ.
(ಒಟ್ಟು ಆಸ್ತಿ – 34.67 ಕೋಟಿ ರೂ.)
3. ವೆಂಕಟರೆಡ್ಡಿ ಮುದ್ನಾಳ್
ಯಾದಗಿರಿ, ಶಾಸಕ (ಬಿಜೆಪಿ)
ಬಿಲ್ ಮೊತ್ತ – 2,02,216 ರೂ.
(ಒಟ್ಟು ಆಸ್ತಿ – 13.41 ಕೋಟಿ ರೂ.)
4. ರಾಜಶೇಖರ್ ಬಿ ಪಾಟೀಲ್
ಹುಮ್ನಾಬಾದ್, ಶಾಸಕ (ಕಾಂಗ್ರೆಸ್)
ಬಿಲ್ ಮೊತ್ತ – 1,76,181 ರೂ.
(ಒಟ್ಟು ಆಸ್ತಿ – 12.85 ಕೋಟಿ ರೂ.)
5. ಸೋಮನಗೌಡ ಬಿ ಪಾಟೀಲ್
ದೇವರಹಿಪ್ಪರಗಿ, ಶಾಸಕ (ಬಿಜೆಪಿ)
ಬಿಲ್ ಮೊತ್ತ – 1,27,640 ರೂ.
(ಒಟ್ಟು ಆಸ್ತಿ – 4.85 ಕೋಟಿ ರೂ.)
6. ರಾಮಪ್ಪ
ಹರಿಹರ, ಶಾಸಕ (ಕಾಂಗ್ರೆಸ್)
ಬಿಲ್ ಮೊತ್ತ – 1,12,248 ರೂ.
(ಒಟ್ಟು ಆಸ್ತಿ – 1.90 ಕೋಟಿ ರೂ.)
7. ಜಿ ಹೆಚ್ ತಿಪ್ಪಾರೆಡ್ಡಿ
ಚಿತ್ರದುರ್ಗ, ಶಾಸಕ (ಬಿಜೆಪಿ)
ಬಿಲ್ ಮೊತ್ತ – 75,555 ರೂ.
(ಒಟ್ಟು ಆಸ್ತಿ – 48 ಕೋಟಿ ರೂ.)
8. ಎಂ ಶ್ರೀನಿವಾಸ್
ಮಂಡ್ಯ, ಶಾಸಕ (ಜೆಡಿಎಸ್)
ಬಿಲ್ ಮೊತ್ತ – 49,816 ರೂ.
(ಒಟ್ಟು ಆಸ್ತಿ – 2.87 ಕೋಟಿ ರೂ.)
9. ವಿ.ಮುನಿಯಪ್ಪ
ಶಿಡ್ಲಘಟ್ಟ, ಶಾಸಕ (ಕಾಂಗ್ರೆಸ್)
ಬಿಲ್ ಮೊತ್ತ – 33,545 ರೂ.
(ಒಟ್ಟು ಆಸ್ತಿ – 8.31 ಕೋಟಿ ರೂ.)
10. ಬೆಳ್ಳಿ ಪ್ರಕಾಶ್
ಕಡೂರು, ಶಾಸಕ (ಬಿಜೆಪಿ)
ಬಿಲ್ ಮೊತ್ತ – 23,100 ರೂ.
(ಒಟ್ಟು ಆಸ್ತಿ – 1.16 ಕೋಟಿ ರೂ.)
11. ಬಿಸಿ ನಾಗೇಶ್
ತಿಪಟೂರು, ಶಾಸಕ (ಕಾಂಗ್ರೆಸ್)
ಬಿಲ್ ಮೊತ್ತ – 14,987 ರೂ.
(ಒಟ್ಟು ಆಸ್ತಿ – 9.47 ಕೋಟಿ ರೂ.)
12. ಆನಂದ ನ್ಯಾಮಗೌಡ
ಜಮಖಂಡಿ, ಶಾಸಕ (ಕಾಂಗ್ರೆಸ್)
ಬಿಲ್ ಮೊತ್ತ – 8,140 ರೂ.
(ಒಟ್ಟು ಆಸ್ತಿ – 4.05 ಕೋಟಿ ರೂ.)
13. ದೇವಾನಂದ ಚವ್ಹಾಣ
ನಾಗಠಾಣಾ, ಶಾಸಕ (ಕಾಂಗ್ರೆಸ್)
ಬಿಲ್ ಮೊತ್ತ – 2,875 ರೂ.
(ಒಟ್ಟು ಆಸ್ತಿ – 3.49 ಕೋಟಿ ರೂ.)