– 2 ದಿನ ಟ್ರಾಫಿಕ್ ಕೆಲಸ ನೀಡಿದ ಡಿಸಿಪಿ
ತಿರುವನಂತಪುರಂ: ಅಧಿಕಾರ ತಮ್ಮ ಕೈಗೆ ಬರುತ್ತಿದ್ದಂತೆಯೇ ಜನ ಬದಲಾಗುತ್ತಾರೆ. ದರ್ಪದಿಂದ ಮೆರೆಯಲು ಆರಂಭಿಸುತ್ತಾರೆ ಎಂಬುದಕ್ಕೆ ಕೇರಳದ ಕೊಚ್ಚಿಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.
ಹೌದು. ಐಶ್ವರ್ಯಾ ಡೊಂಗ್ರೆ ಎಂಬವರು ಜನವರಿ 1 ರಂದು ಕೇರಳದ ಕೊಚ್ಚಿಯಲ್ಲಿ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆ ಬಳಿ ತಾನು ನಿಷ್ಠೆಯಿಂದ ಕೆಲಸ ಮಾಡುವುದಾಗಿ ಹೇಳಿ ಭಾನುವಾರ ಸ್ಥಳಿಯ ಪೊಲೀಸ್ ಠಾಣೆಗೆ ತೆರಳಿದ್ದಾರೆ.
Advertisement
Advertisement
ಇನ್ ಸ್ಪೆಕ್ಷನ್ ಗೆ ಎಂದು ತೆರಳಿದಾಗ ಡಿಸಿಪಿ ಸಮವಸ್ತ್ರ ಧರಿಸಿರಲಿಲ್ಲ. ಸಾಮಾನ್ಯರಂತೆ ಡ್ರೆಸ್ ಮಾಡಿದ್ದ ಡಿಸಿಪಿ ಠಾಣೆಯಿಂದ ಸ್ವಲ್ಪ ದೂರದಲ್ಲಿಯೇ ಕಾರು ನಿಲ್ಲಿಸಿ, ಮಾಸ್ಕ್ ಧರಿಸಿ ಹೋಗಿದ್ದಾರೆ. ಡಿಸಿಪಿ ಠಾಣೆಯತ್ತ ತೆರಳುತ್ತಿದ್ದಂತೆಯೇ ಮಹಿಳಾ ಪೇದೆಯೊಬ್ಬರು ಅವರನ್ನು ತಡೆದಿದ್ದಾರೆ. ಅಲ್ಲದೆ ಏನಾಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
Advertisement
ಇದರಿಂದ ಸಿಟ್ಟಿಗೆದ್ದ ಡಿಸಿಪಿ, ಉನ್ನತ ಹುದ್ದೆಯಲ್ಲಿರುವ ನನ್ನನ್ನು ಗುರುತಿಸದೆ ದಾರಿಯಲ್ಲೇ ತಡೆದರು ಎಂದು ಕೋಪಗೊಂಡು ಆಕೆಗೆ ಎರಡು ದಿನಗಳ ಕಾಲ ಟ್ರಾಫಿಕ್ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಪೊಲೀಸರೆಂದರೆ ಯಾವಾಗಲೂ ಅಲರ್ಟ್ ಆಗಿರಬೇಕು. ಉನ್ನತ ಅಧಿಕಾರಿಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಆದರೆ ಆ ಮಹಿಳಾ ಪೇದೆಗೆ ಮಾಹಿತಿ ಇಲ್ಲದಿರುವುದರಿಂದ ಶಿಕ್ಷೆ ನೀಡಿರುವುದಾಗಿ ಡಿಸಿಪಿ ಹೇಳಿದ್ದಾರೆ.
Advertisement
ಒಟ್ಟಿನಲ್ಲಿ ಮಹಾಮಾರಿ ಕೊರೊನಾ ಬಂದ ಬಳಿಕ ಅವಾಂತರಗಳ ಮೇಲೆ ಅವಾಂತರಗಳು ಆಗುತ್ತಿವೆ. ಈ ಮಾಸ್ಕ್ ಧರಿಸದರೆ ನಮ್ಮವರನ್ನೇ ಗುರುತಿಸುವುದು ಕಷ್ಟ. ಹೀಗಿರುವಾಗ ಆಗ ತಾನೇ ಅಧಿಕಾರ ಸ್ವೀಕರಿಸಿರುವ ಡಿಸಿಪಿಯನ್ನು ಪೇದೆ ಗುರುತಿಸಲು ಕಷ್ಟವಾಗಿತ್ತು. ಅಧಿಕಾರ ವಹಿಸಿಕೊಂಡು 15 ದಿನಗಳೊಳಗೆ ಇಂತಹ ಶಿಕ್ಷೆ ನೀಡಿರುವುದು ತಪ್ಪು ಎಂದು ಹಿರಿಯ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.