ಬೆಂಗಳೂರು: ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ ಏಪ್ರಿಲ್ 20ರವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ ಸರಾಸರಿ ಐದು ಸಾವಿರಕ್ಕೂ ಅಧಿಕ ಪ್ರಕರಣಗಳ ವರದಿ ಆಗುತ್ತಿರುವ ಹಿನ್ನೆಲೆ ಶಾಲೆಗಳನ್ನ ಪ್ರಾರಂಭ ಮಾಡೋದು ಬೇಡ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ತಜ್ಞರ ಸಲಹೆ ಮೇರೆಗೆ ಸರ್ಕಾರ ಎರಡು ವಾರ ಶಾಲೆಗಳಿಗೆ ರಜೆ ನೀಡಿತ್ತು. ಕೊರೊನಾ ಕೇಸ್ ದಿನೇ ದಿನೇ ಹೆಚ್ಚಳ ಆಗ್ತಿದೆ. ಹೀಗಾಗಿ ರಜೆ ಅವಧಿ ವಿಸ್ತರಣೆ ಮಾಡುವಂತೆ ತಜ್ಞರ ಟೀಂ ಸಲಹೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ತಜ್ಞರ ಎಚ್ಚರಿಕೆ ಏನು?
ಏಪ್ರಿಲ್ 20ರವರೆಗೆ ನೀಡಿರುವ ರಜೆಯನ್ನ ಏಪ್ರಿಲ್ ಅಂತ್ಯದವರೆಗೆ ವಿಸ್ತರಣೆ ಮಾಡಿ. ಕೊರೊನಾ ಸೋಂಕು ಕಂಟ್ರೋಲ್ ಗೆ ಬರೋವರೆಗೂ ಶಾಲೆ ಪ್ರಾರಂಭ ಬೇಡ. ಮತ್ತೆ ಪರಿಸ್ಥಿತಿ ನೋಡಿಕೊಂಡು ರಜೆ ಅವಧಿ ವಿಸ್ತರಣೆ ಮಾಡು ಬಗ್ಗೆ ನಿರ್ಧಾರ ಮಾಡಿ. ಬೆಂಗಳೂರಿನಲ್ಲಿ ದಿನೇ ದಿನೇ ಕೇಸ್ ಹೆಚ್ಚಳ ಆಗ್ತಿದೆ. ಹೀಗಾಗಿ ಈ ಸಮಯಲ್ಲಿ ಶಾಲೆ ಪ್ರಾರಂಭ ಬೇಡ. ಶಾಲೆ ಪ್ರಾರಂಭ ಆದ್ರೆ ಮತ್ತೆ ಸೋಂಕು ಹೆಚ್ಚಳ ಆಗಬಹುದು. 10 ಮತ್ತು 12 ನೇ ತರಗತಿಗಳಿಗೆ ಈಗ ನಡೆಯುತ್ತಿರುವಂತೆಯೇ ಶಾಲೆ ನಡೆಸಿ.
Advertisement
Advertisement
10-12 ನೇ ತರಗತಿಗಳ ಪರೀಕ್ಷೆಗಳನ್ನ ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಸಿ. 1-9 ನೇ ತರಗತಿಗಳಿಗೆ ಸದ್ಯಕ್ಕೆ ಕೊರೊನಾ ಕಂಟ್ರೋಲ್ ಗೆ ಬರೋವರೆಗೂ ಎಕ್ಸಾಂ ನಡೆಸೋದು ಬೇಡ. ಎಕ್ಸಾಂ ಮಾಡಲೇಬೇಕಾದ್ರೆ ಆನ್ಲೈನ್ ನಲ್ಲಿ ನಡೆಸೋದು ಸೂಕ್ತ. ಪಠ್ಯ ಬೋಧನೆಗೆ ಆನ್ ಲೈನ್, ಯೂಟ್ಯೂಬ್, ದೂರದರ್ಶನ ಸೇರಿದಂತೆ ಇನ್ನಿತರ ಮಾರ್ಗಗಳನ್ನ ಸದ್ಯಕ್ಕೆ ಮುಂದುವರಿಸಿ ಎಂದು ಸಲಹೆ ನೀಡಿದೆ.